Oneindia.in - thatsKannada Movies
Kannada rss gives xml feed of kannada news. Thats kannada is Kannada online.
-
1. ರತ್ನಾನಿ ದಿನದರ್ಶಿಕೆಯಲ್ಲಿ ಬೆತ್ತಲಾದ ದೀಪಿಕಾ
-
2. ರಜನಿಕಾಂತ್ ಮಗಳಿಗೆ ಕೂಡಿಬಂತು ಕಂಕಣ
-
3. ಸಿಡಿ ರೂಪದಲ್ಲಿ ಡಾ.ಸಿ. ಅಶ್ವಥ್ ಹಾಡುಗಳು
-
4. ನಯನ ಸುಂದರಿ ಬಿಪಶಾ ಬಸು ಹುಟ್ಟುಹಬ್ಬ
-
5. ತಮಿಳಿಗೆ ಹೋಗಲು ಕಾರಣ ವಿಷ್ಣು: ರಜನಿಕಾಂತ್
-
6. 2009ರ ವರ್ಷದ ನಟಿ ಸೌಗಂಧಿಕಾ ಪುಷ್ಪ!
-
7. ಗಲ್ ರಾಣಿಯ ಪ್ರಥಮ ಚುಂಬನ ಪ್ರಸಂಗ
-
8. ಸಂಕ್ರಾಂತಿ ಹಬ್ಬಕ್ಕೆ 'ಪೊರ್ಕಿ' ದರ್ಶನ
-
9. ಭಾರತದಲ್ಲಿ ರು.70 ಕೋಟಿ ಬಾಚಿದ ಅವತಾರ್
-
10. ಶ್ರುತಿ, ಮಹೇಂದರ್ ರಾಜಿ ಸಂಧಾನ ವಿಫಲ
-
11. ನಾವು ಮಾಡಿದ ತಪ್ಪನ್ನು ಮಾಡಬೇಡಿ: ದ್ವಾರಕೀಶ್
-
12. ರೀಮೇಕ್ ಅಬ್ಬರದಲ್ಲಿ ಕೊಚ್ಚಿ ಹೋದ 2009
-
13. 'ಬೆಳ್ಳಿ ಹೆಜ್ಜೆ'ಯಲ್ಲಿ ಬಿ.ಸರೋಜಾದೇವಿ
-
14. ನಂಜನಗೂಡಿನಿಂದ ಬೆಂಗಳೂರಿಗೆ ನಂಜುಂಡ
-
15. ಅಮೀರ್ 'ತ್ರಿ ಇಡಿಯಟ್ಸ್'ಗೆ ಲಕ್ಷ್ಮಿ ಕಟಾಕ್ಷ
-
16. ಜ.22ಕ್ಕೆ ವಿಷ್ಣು ಕೊನೆಯ ಚಿತ್ರ 'ಆಪ್ತರಕ್ಷಕ'
-
17. ಪಮೇಲಾ ಆಂಡರ್ಸನ್ ಪೂರ್ಣಕುಂಭ ದರ್ಶನ
-
18. ಪೊಲೀಸ್ ಕ್ವಾರ್ಟರ್ಸ್ : ಎಲ್ಲೆಲ್ಲೂ ಸ್ವಮೇಕ್ ಸ್ವಾದ!
-
19. ಮಿನುಗು :ನಿದ್ರೆಗೆ ರತ್ನಗಂಬಳಿ ಹಾಸುತ್ತದೆ
-
20. ಜ.7 ರಿಂದ 13 ರ ವರೆಗೆ ಮಕ್ಕಳ ಚಿತ್ರೋತ್ಸವ
-
21. ಕನ್ನಡ ಚಿತ್ರರಂಗದ ಜಮಾ ಖರ್ಚು: ಇಸವಿ 2009
-
22. ವರ್ಷದ ಗೀತರಚನೆಕಾರ ಯೋಗರಾಜ ಭಟ್!
-
23. ದಾಂಧಲೆಗೆ ವಿಷ್ಣು ಅಭಿಮಾನಿಗಳು ಕಾರಣರಲ್ಲ
-
24. ಡಾ.ವಿಷ್ಣುವರ್ಧನ್ ಫಿಲ್ಮ್ ಸಿಟಿ ನಿರ್ಮಾಣ
-
25. ಬಿಪಾಶ ಗೆಜ್ಜೆ ನಾದಕ್ಕೆ ಕುಣಿವ ಕಾಂಚನ
-
26. ದಕ್ಷಿಣ ದಿಕ್ಕಿನಲ್ಲಿ ವಿಷ್ಣುವರ್ಧನ್ ಪಯಣ
-
27. ವಿಷ್ಣು ಕನಸು ನನಸು ಮಾಡದ ಎಸ್ಸೆಂ ಕೃಷ್ಣ
-
28. ವಿಷ್ಣುವರ್ಧನ್ ಗೆ ತಟ್ಟಿತೆ ನಾಗವಲ್ಲಿ ಶಾಪ?
-
29. ನ್ಯಾಷನಲ್ ಮೈದಾನದ ಸುತ್ತಮುತ್ತ ಉದ್ರಿಕ್ತ ಸ್ಥಿತಿ
-
30. ವಿಷ್ಣುವರ್ಧನ್ ಅಂತಿಮ ಯಾತ್ರೆ ಆರಂಭ
-
31. ಬಾಲಣ್ಣನ ಹೃದಯದಲ್ಲಿ ವಿಷ್ಣುಗೆ ಸ್ಥಾನ
-
32. ಮೈಸೂರು : ವಿಷ್ಣು ಅಭಿಮಾನಿ ಆತ್ಮಹತ್ಯೆ
-
33. ಕಂಠೀರವದಲ್ಲಿ ರಾಜ್, ಅಭಿಮಾನ್ ದಲ್ಲಿ ವಿಷ್ಣು
-
34. ವಿಷ್ಣುವರ್ಧನ್ ಜೀವನ ಸಿಂಹಾವಲೋಕನ
-
35. 2009: ಸೋಲು,ಸಾವಿನ ಸಂವತ್ಸರ
-
36. ಕುಸಿದು ಬಿದ್ದ ಭಾರತಿ, ಜಯಂತಿ
-
37. ಶಾಂತಿ ಕಾಪಾಡಿ, ಸಿಎಂ, ಭಾರತಿ
-
38. ಅಭಿನಯದ ಮಲಯ ಮಾರುತ ವಿಷ್ಣುವರ್ಧನ್
-
39. ತುತ್ತು ಅನ್ನ ತಿನ್ನೋಕೆ ಬೊಗಸೇ ನೀರು ಕುಡಿಯೋಕೆ
-
40. ತುತ್ತು ಅನ್ನ ತಿನ್ನೋಕೆ ಹಾಡು ಹುಟ್ಟಿದ ಸಮಯ
-
41. ವಿಷ್ಣು ನಿಧನ: ಅಂಧ ಅಭಿಮಾನಿಗಳ ಗಲಾಟೆ
-
42. ವಿಷ್ಣುವರ್ಧನ್ ಅಂತಿಮ ಯಾತ್ರೆಗೆ ಮಹಾಪೂರ
-
43. ವಿಷ್ಣು ನಿಧನಕ್ಕೆ ನಿಮ್ಮ ಕಂಬನಿ
-
44. ಸಾಹಸಸಿಂಹ ಡಾ.ವಿಷ್ಣುವರ್ಧನ್ ವಿಧಿವಶ
-
45. 'ಮತ್ತೆ ಮುಂಗಾರಿ'ನಲ್ಲಿ ಆಶಾ ಭೋಂಸ್ಲೆ ಹಾಡು
-
46. ಕಿರುತೆರೆಗೆ ಅಡಿಯಿಟ್ಟ ಹ್ಯಾಟ್ರಿಕ್ ಹೀರೋ
-
47. ಗಾಯಕ ಸಿ ಅಶ್ವಥ್ ಗೆ ಅಂತಿಮ ನಮನ
-
48. 'ಪ್ರಾರ್ಥನೆ'ಗೆ ಕೈಜೋಡಿಸಿದ ಪ್ರಕಾಶ್ ರೈ
-
49. ನಾಡ ರೈತ ಗೀತೆ ನೇಗಿಲ ಯೋಗಿ ಹಾಡು
-
50. ಸ್ವರ ಮಾಂತ್ರಿಕ, ಗಾಯಕ ಸಿ ಅಶ್ವಥ್ ಇನ್ನಿಲ್ಲ
-
51. ರಾಮ್ : ರೆಡೀ... 123...ಸ್ಟಾರ್ಟ್
-
52. ಶಿಶಿರ : `ಮಂಜು' ಸರಿಯಿತು, ಮುತ್ತು ಸುರಿಯಿತು!
-
53. ಮುಗುಳುನಗೆ ಬೀರಿದ ಮಂದಹಾಸ
-
54. ಹೂವಿನ ಕಡೆಗೆ ರವಿ ಹೊರಳುವ ಸಮಯ
-
55. ಕೆಎಂಎಫ್ ನೂತನ ರಾಯಭಾರಿ ಪುನೀತ್
-
56. ರಾಕ್ ಲೈನ್ ವರ್ಷದ ಧೀರ ನಿರ್ಮಾಪಕ
-
57. ಜೀ ಕನ್ನಡದಲ್ಲಿ ಎದ್ದೇಳು ಮಂಜುನಾಥ
-
58. ಬೆಳಗಾವಿಯಲ್ಲಿ ಪ್ರತಿಷ್ಠಿತ ಮಕ್ಕಳ ಚಿತ್ರೋತ್ಸವ
-
59. ಪ್ರಿಯಕರನ ಜತೆ ನಟಿ ಶಕೀಲಾ ಮದುವೆ
-
60. ಶೇಕಡಾವಾರು ಪದ್ಧತಿಯಲ್ಲಿ ಪೊಲೀಸ್ ಕ್ವಾಟ್ರಸ್
-
61. 'ಜಸ್ಟ್ ಮಾತ್ ಮಾತಲ್ಲಿ' ಧ್ವನಿಸುರುಳಿ ವಿಮರ್ಶೆ
-
62. ವಿಜಿಯ ರಾಧೆಯಾಗಿ ತೆಲುಗಿನ ಮಧುವಿಕಾ
-
63. ಜೋಗಯ್ಯನಿಗೆ ಕಡೆಗೂ ಮುಹೂರ್ತ ಫಿಕ್ಸ್
-
64. ಮೇಲ್ಮನೆಯಲ್ಲಿ ಮೊಳಗಲಿ ಕೃಷ್ಣಪ್ಪ, ಸಂದೇಶ್ ಶಂಖ
-
65. ಪ್ರಕಾಶ್ ರೈಗೆ ಪ್ರತಿಷ್ಠಿತ ವಿ ಶಾಂತಾರಾಂ ಪ್ರಶಸ್ತಿ
-
66. ಅನು ಪ್ರಭಾಕರ್ ಬರಲಿದ್ದಾರೆ ನಿಮ್ಮ ಮನೆಗೆ
-
67. ಕಸ್ತೂರಿಯಲ್ಲಿ 'ಧಮ್' ರಿಯಾಲಿಟಿ ಶೋ
-
68. ಗಂಡಂದಿರ ಮೇಲೆ ಹೆಂಡ್ತೀರ ದರ್ಬಾರ್
-
69. ನಿಮ್ಮ ನೆಚ್ಚಿನ ಟಿವಿ ಚಾನಲ್ ಯಾವುದು?
-
70. ವರ್ಷದ ಕೊನೆಯ ಚಿತ್ರವಾಗಿ 'ಶಿಶಿರ'
-
71. ಕಿಂಗ್ ಫಿಶರ್ ಕ್ಯಾಲೆಂಡರ್ ಲೋಕಾರ್ಪಣೆ
-
72. ಪಾತ್ರಕ್ಕಾಗಿ ಊಟ ಬಿಟ್ಟು ತೆಳ್ಳಗಾದ ಕಿಟ್ಟಿ
-
73. ಲಿಫ್ಟ್ ಕೊಡ್ಲಾ ಎನ್ನಲು ಬಂದ ಅರ್ಚನಾ
-
74. ಪುನೀತ್, ಪ್ರಿಯಾಮಣಿಯ 'ರಾಮ್'ಸಿದ್ಧ
-
75. 2012 ಏನಾಗುತ್ತದೋ ಆಗಲಿ: ಗಣೇಶ್
-
76. ಅಭಿನಯ ಶಾರದೆ ಜಯಂತಿ ಸಕತ್ ಹಾಟ್
-
77. ಗುರುವಿನ ಡೈರೆಕ್ಟರ್ ಸ್ಪೆಷಲ್ :ಕೋಮಲ್ ಔಟ್
-
78. ರೆಬೆಲ್ ಸ್ಟಾರ್ ಅಂಬಿ ರಾಜೀನಾಮೆ ವಾಪಸ್
-
79. ಕಳ್ಳರ ಸಂತೆ:ಲಂಚ ಸಾಮ್ರಾಜ್ಯಕ್ಕೆ ಕನ್ನಡಿ
-
80. ಶೆಣೈ 'ಪ್ರಾರ್ಥನೆ'ಗೆ ನಟಿ ಸುಧಾರಾಣಿ ಇಲ್ಲ
-
81. ನಿರ್ಮಾಪಕಿ ಶಿಲ್ಪಾ ಗಣೇಶ್ ವಿರುದ್ಧ ದೂರು
-
82. ಚಿತ್ರನಟಿ ಅಮೂಲ್ಯಾರಿಗೆ ಪೊಲೀಸ್ ಭದ್ರತೆ?
-
83. ನಾಣಿ ವಿರುದ್ಧ 'ಚಂದ್ರ ಚಕೋರಿ' ಕತೆ ಕದ್ದ ಆರೋಪ
-
84. ಫ್ಲಾಪ್ ತಾರೆಗಳ ಪೇಜ್ 3 ಶೋಕಿ
-
85. ಕಲಾವಿದರ ಸಂಘಕ್ಕೆ ಅಂಬರೀಷ್ ರಾಜೀನಾಮೆ
-
86. ಭೀಮಕಾಯ ಸೌಮ್ಯ ಸ್ವಭಾವದ ಸರ್ಕಸ್ ಬೋರಣ್ಣ
-
87. ಜನವರಿಯಲ್ಲಿ ಚಲನಚಿತ್ರ ಪ್ರಶಸ್ತಿ ಪ್ರದಾನ
-
88. ಮುರ್ಡೋಕ್ ತೆಕ್ಕೆಗೆ ಎನ್ ಡಿಟಿವಿ ಇಮ್ಯಾಜಿನ್
-
89. ವಿಷಮ ಸ್ಥಿತಿಯಲ್ಲಿ ಗಾಯಕ ಸಿ ಅಶ್ವಥ್
-
90. ಕೊಟ್ಟ ಮಾತಿಗೆ ತಪ್ಪಿದ ನಾಗತಿಹಳ್ಳಿ ಚಂದ್ರಶೇಖರ್
-
91. ಬಾಕ್ಸಾಫೀಸ್ ಘರ್ಷಣೆ ತಪ್ಪಿಸಿದ ಪುನೀತ್ 'ರಾಮ್'
-
92. ಎರಡುವರೆ ಸಾವಿರ ಕೋಟಿ ಬಜೆಟ್ ನ 'ಅವತಾರ್'
-
93. ವಿರಸವೆಂಬ ವಿಷಕೆ ಬಲಿಯಾದೆ ಏತಕೇ
-
94. ಭೂತಯ್ಯನ ರೂವಾರಿ ಚಂದೂಲಾಲ್ ಇನ್ನಿಲ್ಲ
-
95. 'ಸಿಹಿ ಮುತ್ತು' ಚಿತ್ರದ ಐಟಂ ಸಾಂಗ್ ನಲ್ಲಿ ದರ್ಶನ್
-
96. 'ನೂರು ಜನ್ಮಕು' ಪತ್ರಿಕಾಗೋಷ್ಠಿಗೆ ಐಂದ್ರಿತಾ ಇಲ್ಲ
-
97. ಕುವೆಂಪು ಮನೆಯಲ್ಲೇ ರಸಋಷಿ ಚಿತ್ರೀಕರಣ
-
98. ಬಿಕಿನಿ ಕೈಬಿಡುವಂತೆ ಕತ್ರಿನಾ ಮೇಲೆ ಸಲ್ಲು ಫತ್ವಾ
-
99. ಸ್ವದೇಶ,ವಿದೇಶ ಸುತ್ತಿ ಬಂದ 'ಪೊರ್ಕಿ'
-
100. ನಮ್ಮ ತಾತ ಭಾರದ್ವಾಜರ ಸಿನಿಮಾ ವ್ಯಾಖ್ಯಾನ
ರತ್ನಾನಿ ದಿನದರ್ಶಿಕೆಯಲ್ಲಿ...
2010-01-07 10:54
ದೀಪಿಕಾ ಪಡುಕೋಣೆಯನ್ನು ಬೆತ್ತಲಾಗಿ ಕ್ಯಾಮೆರಾದಲ್ಲಿ ಸೆರೆಹಿಡಿಯುವುದು ಸಾಮಾನ್ಯದ ಮಾತೆ. ಅಂತಹ ಸಾಹಸವನ್ನು ಖ್ಯಾತ ಛಾಯಾಗ್ರಾಹಕ ದಬೂ ರತ್ನಾನಿ ಮಾಡಿದ್ದಾರೆ. ತಮ್ಮ ಕ್ಯಾಮೆರಾದಲ್ಲಿ ದೀಪಿಕಾ ಪಡುಕೋಣೆಯ ಬೆತ್ತಲೆ ಚಿತ್ರವನ್ನು ಸೆರೆಹಿಡಿದ್ದಾರೆ!ಆಶ್ಚರ್ಯಪಡುವಂತಹದ್ದೇನು ಇಲ್ಲ. ದಬೂ ರತ್ನಾನಿ ಹೊರತಂದಿರುವ 2010ನೇ ವರ್ಷದ ದಿನದರ್ಶಿಕೆಯಲ್ಲಿ ದೀಪಿಕಾ ತನ್ನ ಅಂಗಸೌಷ್ಟವನ್ನು ಪ್ರದರ್ಶಿಸಿದ್ದಾರೆ. ನೀಳ ಕಾಲ್ಗಳ ಸುಂದರಿಯ ಜತೆಗೆ ಹಲವಾರು ಬಾಲಿವುಡ್ ನಟ, ನಟಿಯರು
ರಜನಿಕಾಂತ್ ಮಗಳಿಗೆ...
2010-01-07 09:44
ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಮಗಳು ಸೌಂದರ್ಯ ರಜನಿಕಾಂತ್ ಗೆ ಕಂಕಣಬಲ ಕೂಡಿಬಂದಿದೆ. ಫೆಬ್ರವರಿ 14, 2010ರ 'ಪ್ರೇಮಿಗಳ ದಿನ'ದಂದು ನಿಶ್ಚಿತಾರ್ಥ ನಡೆಯಲಿದೆ. ಇದು ಹಿರಿಯರು ನಿರ್ಧರಿಸಿದ ಪ್ರೇಮ ವಿವಾಹ ಎನ್ನುತ್ತವೆ ತಮಿಳು ಚಿತ್ರರಂಗದ ಮೂಲಗಳು. ರಜನಿಕಾಂತ್ ಭಾವಿ ಅಳಿಯನ ಹೆಸರು ಅಶ್ವಿನ್ ಕುಮಾರ್. ಈತ ರಿಯಲ್ ಎಸ್ಟೇಟ್ ನ
ಸಿಡಿ ರೂಪದಲ್ಲಿ ಡಾ.ಸಿ....
2010-01-07 07:53
ಸ್ವರ ಮಾಂತ್ರಿಕ ಸಿ.ಅಶ್ವಥ್ ಅವರ ಅಭಿಮಾನಿಗಳಿಗೊಂದು ಸಿಹಿ ಸುದ್ದಿ. ಅಶ್ವಥ್ ಕಂಚಿನ ಕಂಠದಲ್ಲಿ ಹೊರಹೊಮ್ಮಿದ ಹಾಡುಗಳ ಸಿಡಿಯನ್ನು ಲಹರಿ ಸಂಸ್ಥೆ ಹೊರ ತರುತ್ತಿದೆ. 'ಡಾ.ಸಿ.ಅಶ್ವಥ್ ನೆನಪು' ಹೆಸರಿನಲ್ಲಿ ಅವರ ಜನಪ್ರಿಯ ಗೀತೆಗಳ ಏಳು ಎಂಪಿ3 ಸಿಡಿಗಳು ಮಾರುಕಟ್ಟೆಗೆ ಶೀಘ್ರದಲ್ಲೆ ಬಿಡುಗಡೆಯಾಗಲಿವೆ. ಪ್ರತಿ ಸಿಡಿ 25 ಹಾಡುಗಳನ್ನು ಒಳಗೊಂಡಿರುತ್ತದೆ. ಒಟ್ಟು ಏಳು ಸಿಡಿಗಳಲ್ಲಿ 175 ಹಾಡುಗಳು ಕೇಳುಗರಿಗೆ
ನಯನ ಸುಂದರಿ ಬಿಪಶಾ ಬಸು...
2010-01-07 06:44
ಸುಂದರ ಕಂಗಳ ಒಡತಿ ಬಿಪಶಾ ಬಸು 32ರ ಹರೆಯಕ್ಕೆ ಜಿಗಿದಿದ್ದಾರೆ. ಈಕೆ ಬರೀ ಸುಂದರ ಕಂಗಳಿಗಷ್ಟೇ ಸೀಮಿತವಾಗಿಲ್ಲ. ಏಷ್ಯಾದ ಅತ್ಯಂತ ಸೆಕ್ಸಿ ಮಹಿಳೆಯರ ಸಾಲಿನಲ್ಲೂ ಸ್ಥಾನ ಪಡೆದಿದ್ದಾರೆ. ಬಿಪಶಾರಿಗೆ 'ಬೊನ್ನಿ' ಎಂಬ ಮುದ್ದಾದ ಅಡ್ಡಹೆಸರು ಇದೆ. ಬಿಪಶಾ ಎಂದರೆ 'ಗಾಢವಾದ ಕಾಮನೆ' ಎಂಬ ಅರ್ಥವೂ ಉಂಟಂತೆ. ತನ್ನ ಹದಿನೇಳನೆ ವಯಸ್ಸಿನಲ್ಲೇ ಖ್ಯಾತ ಫೋರ್ಡ್ ಸೂಪರ್ ಮಾಡೆಲ್ ಸ್ಪರ್ಧೆಯಲ್ಲಿ
ತಮಿಳಿಗೆ ಹೋಗಲು ಕಾರಣ...
2010-01-06 14:14
''ವಿಷ್ಣು ಜೊತೆ ಸ್ನೇಹ ಬೆಳೆಸಿದವರಿಗೆ ಮಾತ್ರ ಸ್ನೇಹ ಎಂದರೇನು ಎಂದು ಗೊತ್ತಾಗುತ್ತದೆ.ನನ್ನ ಮತ್ತು ವಿಷ್ಣು ಸ್ನೇಹ ಸಂಬಂಧ 32 ವರ್ಷಗಳಷ್ಟು ಹಳೆಯದು. ನನಗೆ ಅಣ್ಣನಂತೆ ಪ್ರೋತ್ಸಾಹ ನೀಡಿದ ನಟ. ವಿಷ್ಣು ಅವರ ಸಾವಿನ ಸುದ್ದಿ ನಂಬಲಿಕ್ಕೆ ಆಗುತ್ತಿಲ್ಲ'' ಎಂದು ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್ ಬುಧವಾರ ಬೆಂಗಳೂರಿನಲ್ಲಿ ಹೇಳಿದರು.ಬೆಂಗಳೂರಿನ ಜಯನಗರದ ವಿಷ್ಣುವರ್ಧನ್ ಅವರ ಮನೆಗೆ
2009ರ ವರ್ಷದ ನಟಿ ಸೌಗಂಧಿಕಾ...
2010-01-06 10:51
ಜಂಗ್ಲಿ ಚಿತ್ರೀಕರಣದ ಸಂದರ್ಭ. ನೀನೆಂದರೆ ನನ್ನೊಳಗೆ ಹಾಡು. ನಿರ್ದೇಶಕ ಸೂರಿ ಒಂದಿಷ್ಟು ಹೆಚ್ಚೇ ಯೋಚಿಸಿದರು. ನಾಯಕ ವಿಜಯ್ ಕಟ್ಟುಮಸ್ತಾದ ಆಳು. ಅವರ ಅಂಗೈ ಮೇಲೆ ಒಂದೇ ಕಾಲಲ್ಲಿ ನಿಂತು, ಮೆಲ್ಲಗೆ ಮೈಮೇಲೆ ಬೀಳುವಂಥ ಶಾಟ್ ಸಿದ್ಧಗೊಂಡಿತು. ನಾಯಕಿ ಆ ಶಾಟ್ ಕೂಡದೆಂದು ನಿಷ್ಠುರವಾಗಿ ಹೇಳಿಬಿಟ್ಟರು. ಪಕ್ಕದಲ್ಲಿದ್ದ ಅವರಮ್ಮ ಸಿದ್ಧವಿದ್ದರೂ ನಟಿಯೇ ಒಲ್ಲೆ ಅಂತ ಹೇಳಿದ್ದು ನಿರ್ದೇಶಕ ಸೂರಿ,
ಗಲ್ ರಾಣಿಯ ಪ್ರಥಮ ಚುಂಬನ...
2010-01-06 09:51
'ಗಂಡ ಹೆಂಡತಿ' ಖ್ಯಾತಿಯ ಸಂಜನಾ ಅಲಿಯಾಸ್ ಅರ್ಚನಾ ಗಲ್ ರಾಣಿ ಮತ್ತೊಮ್ಮೆ ಸುದ್ದಿ ಮಾಡಿದ್ದಾರೆ. ಈ ಬಾರಿ ಅವರು ಕ್ರಿಕೆಟಿಗ ಶ್ರೀಶಾಂತ್ ಗೆ ಚುಂಬನ ನೀಡಿ ಸುದ್ದಿಯಾಗಿರುವುದು ವಿಶೇಷ. ಗಲ್ ರಾಣಿಗೆ ಇದು ಪ್ರಥಮ ಚುಂಬನ ಅಲ್ಲ ಅನ್ನಿಸುತ್ತದೆ. ಯಾಕೆಂದರೆ ಆಕೆಗೆ ದಂತ ಭಗ್ನವಾಗಿರುವ ಬಗ್ಗೆ ಎಲ್ಲೂ ಸುದ್ದಿಯಿಲ್ಲ.ಗೋವಾ ತೀರದಲ್ಲಿ ಶ್ರೀಶಾಂತ್ ನನ್ನು
ಸಂಕ್ರಾಂತಿ ಹಬ್ಬಕ್ಕೆ ...
2010-01-06 08:44
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಪೊರ್ಕಿ' ಚಿತ್ರ ಸಂಕ್ರಾಂತಿ (ಜ.14) ಹಬ್ಬಕ್ಕೆ ಪ್ರೇಕ್ಷಕರ ಮುಂದೆ ಬರಲು ಸಿದ್ಧವಾಗಿದೆ. ದರ್ಶನ್ ವೃತ್ತಿ ಜೀವನದಲ್ಲಿ ಅತಿ ಹೆಚ್ಚು ಬಜೆಟ್ ನ ಚಿತ್ರ ಎಂಬ ಹೆಗ್ಗಳಿಕೆಗೆ 'ಪೊರ್ಕಿ' ಪಾತ್ರವಾಗಿದೆ. ಎಂ ಡಿ ಶ್ರೀಧರ್ ನಿರ್ದೇಶನದ 'ಪೊರ್ಕಿ' ಚಿತ್ರವನ್ನು ದತ್ತಾತ್ರೇಯ ಬಚ್ಚೇಗೌಡ ನಿರ್ಮಿಸಿದ್ದು ಪತ್ರಕರ್ತ ಗಣೇಶ್ ಕಾಸರಗೋಡು ಅರ್ಪಿಸುತ್ತಿದ್ದಾರೆ. ರು.7 ಕೋಟಿ
ಭಾರತದಲ್ಲಿ ರು.70 ಕೋಟಿ ಬಾಚಿದ...
2010-01-06 07:10
ಜೇಮ್ಸ್ ಕ್ಯಾಮೆರಾನ್ ನಿರ್ದೇಶನದ 'ಅವತಾರ್' ಚಿತ್ರ ಬಾಕ್ಸಾಫೀಸ್ ಗಳಿಕೆಯಲ್ಲಿ ಹೊಸ ದಾಖಲೆ ನಿರ್ಮಿಸುತ್ತಿದೆ. 'ಟೈಟಾನಿಕ್' ಹಾಗೂ ಇತ್ತೀಚೆಗೆ ತೆರೆಕಂಡ '2012' ಚಿತ್ರದ ಗಳಿಕೆಯನ್ನು ಹಿಂದಿಕ್ಕಿ 'ಅವತಾರ್' ಮುನ್ನುಗ್ಗುತ್ತಿದೆ. ಹತ್ತು ವರ್ಷಗಳ ಹಿಂದೆ 'ಟೈಟಾನಿಕ್' ಚಿತ್ರ 55 ಕೋಟಿ ರು.ಗಳನ್ನು ಗಳಿಸಿತ್ತು. ಕೇವಲ ಹತ್ತು ದಿನಗಳಲ್ಲಿ ರು.70 ಕೋಟಿ ಬಾಚಿ ಈ ದಾಖಲೆಯನ್ನು 'ಅವತಾರ್'
ಶ್ರುತಿ, ಮಹೇಂದರ್ ರಾಜಿ...
2010-01-06 06:05
ನಟಿ ಶ್ರುತಿ ಹಾಗೂ ಎಸ್ ಮಹೇಂದರ್ ದಂಪತಿಗಳು ಒಂದಾಗಿ ಬಾಳಲು ನಡೆಸಿದ ರಾಜಿ ಸಂಧಾನ ವಿಫಲವಾಗಿದೆ. ಬೆಂಗಳೂರಿನ ಕೌಟುಂಬಿಕ ನ್ಯಾಯಾಲಯದಲ್ಲಿ ಇವರಿಬ್ಬರು ಒಂದಾಗಿ ಬಾಳಲು ಮನವೊಲಿಸುವ ಪ್ರಯತ್ನ ಮಾಡಲಾಯಿತು. ವಿವಾಹ ವಿಚ್ಛೇದನ ಪ್ರಕರಣ ವಿಚಾರಣೆ ಪ್ರಾರಂಭವಾದ ನಂತರ ಇದೇ ಮೊದಲ ಸಲ ಶ್ರುತಿ ಮತ್ತು ಮಹೇಂದರ್ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಇಬ್ಬರ ಮನವೊಲಿಸಿ ರಾಜಿ ನಡೆಸಲು ಪ್ರಯತ್ನಿಸಲಾಯಿತು. ಶ್ರುತಿ
ನಾವು ಮಾಡಿದ ತಪ್ಪನ್ನು...
2010-01-05 14:56
ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ನೀರವ ಮೌನ. ಒಮ್ಮೆಲೆ ಮಡುಗಟ್ಟಿದ್ದ ದುಃಖ ಪ್ರವಹಿಸಿದ ಸಮಯ. ಅಸ್ತಂಗತರಾದ ಕನ್ನಡ ಚಿತ್ರರಂಗದ ಮೇರುನಟ ಸಾಹಸಸಿಂಹ ಡಾ.ವಿಷ್ಣುವರ್ಧನ್, ಗಾಯಕ ಸಿ ಅಶ್ವತ್ಥ್, ನಿರ್ಮಾಪಕ ಚೆಂದೂಲಾಲ್ ಜೈನ್ ಮತ್ತು ಸರ್ಕಸ್ ಬೋರಣ್ಣ ಅವರ ಅತ್ಮಕ್ಕೆ ಶಾಂತಿ ಕೋರಿ ಮಂಗಳವಾರ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಈ ಭಾವುಕ ಕ್ಷಣಗಳನ್ನು ಇಡೀ ಸಭೆ ಮೌನವಾಗಿ ಆಲಿಸುತ್ತಿತ್ತು...
ರೀಮೇಕ್ ಅಬ್ಬರದಲ್ಲಿ ಕೊಚ್ಚಿ...
2010-01-05 12:21
ಕನ್ನಡ ಚಿತ್ರೋದ್ಯಮದ ಪಾಲಿಗೆ 2009 ನೀರಸ ಫಲಿತಾಂಶ ನೀಡಿದೆ. ಸಂಖ್ಯೆಯ ದೃಷ್ಟಿಯಲ್ಲಿ ರಿಮೇಕ್ ಚಿತ್ರಗಳು ಅಬ್ಬರಿಸಿದವೇ ಹೊರತು ಗುಣಮಟ್ಟದಲ್ಲಿ ಮಾತ್ರ ಸೊನ್ನೆ. ತೆರೆಕಂಡ 120 ಚಿತ್ರಗಳಲ್ಲಿ ಶೇ.25ರಷ್ಟು ರೀಮೇಕ್ ಚಿತ್ರಗಳು ಎಂಬುದು ಗಮನಾರ್ಹ ಅಂಶ. ಶೇಕಡಾ ನೂರರಷ್ಟು ಮನರಂಜನಾ ತೆರಿಗೆ ಉಳಿಸಿದ್ದಷ್ಟೇ ನಿರ್ಮಾಪಕರ ಪಾಲಿಗೆ ಒದಗಿದ ಲಾಭ.ರಿಮೇಕ್ ಚಿತ್ರಗಳಾದ 'ಸವಾರಿ', 'ಈ ಶತಮಾನದ ವೀರ ಮದಕರಿ',
'ಬೆಳ್ಳಿ ಹೆಜ್ಜೆ'ಯಲ್ಲಿ...
2010-01-05 10:12
ಕರ್ನಾಟಕಚಲನಚಿತ್ರ ಅಕಾಡೆಮಿ ನಡೆಸಿಕೊಡುವ 'ಬೆಳ್ಳಿ ಹೆಜ್ಜೆ' ಕಾರ್ಯಕ್ರಮದಲ್ಲಿ ಈ ಬಾರಿ ದಕ್ಷಿಣ ಭಾರತದ ಖ್ಯಾತ ಅಭಿನೇತ್ರಿ ಬಿ ಸರೋಜಾದೇವಿ ಪಾಲ್ಗೊಳ್ಳಲಿದ್ದಾರೆ. ಚಿತ್ರರಸಿಕರ ಪಾಲಿಗೆ ಜನವರಿ 9ರಂದು ನಡೆಯುವ ವಿಭಿಷ್ಟವಾದ 'ಬೆಳ್ಳಿ ಹೆಜ್ಜೆ' ಕಾರ್ಯಕ್ರಮದಲ್ಲಿ ಸರೋಜಾದೇವಿ ಅವರೊಂದಿಗೆ ಸಂವಾದ ಮಾಡುವ ಸುವರ್ಣ ಅವಕಾಶ ಲಭಿಸಲಿದೆ. ಕನ್ನಡ, ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ಅಭಿನಯಿಸಿರುವ ಬಿ ಸರೋಜಾ ದೇವಿ
ನಂಜನಗೂಡಿನಿಂದ ಬೆಂಗಳೂರಿಗೆ...
2010-01-05 09:03
ತನ್ನ ಹೆಂಡತಿ ಸುಂದರಿಯಾಗಿರುವುದೇ ನಾಯಕ ನಂಜುಂಡನ ಅನುಮಾನಕ್ಕೆ ಮೂಲ ಕಾರಣ. ಆಕೆಯನ್ನು ಯಾರು ಮಾತನಾಡಿಸಿದರೂ ಅನುಮಾನಿಸಿ, ಗೊಂದಲ ಉಂಟುಮಾಡಿಕೊಳ್ಳುತ್ತಾನೆ. ಉಳಿದವರ ಕಣ್ಣಲ್ಲಿ ಅಪಹಾಸ್ಯಕ್ಕೀಡಾಗುತ್ತಾನೆ. ಮಾನಸಿಕ ರೋಗಿಯೊಬ್ಬನ ಈ ಕಥೆಯನ್ನು ಹಾಸ್ಯದ ಟಚ್ ಕೊಟ್ಟು ನಿರ್ದೇಶಕ ಶ್ರೀನಿವಾಸಪ್ರಸಾದ್ ತಮ್ಮ ನಿರ್ದೇಶನದ 'ನಂಜನಗೂಡು ನಂಜುಂಡ' ಚಿತ್ರದಲ್ಲಿ ರಸವತ್ತಾಗಿ ನಿರೂಪಿಸುತ್ತಿದ್ದಾರೆ. ಮಲಯಾಳಂನ 'ಒಡಕ್ಕು ನೌಕಿ ಎಂದಿರಂ' ಚಿತ್ರದ ಕಥೆ ಈ ಚಿತ್ರಕ್ಕೆ
ಅಮೀರ್ 'ತ್ರಿ ಇಡಿಯಟ್ಸ್'ಗೆ...
2010-01-05 07:43
ಬಾಲಿವುಡ್ ಚಿತ್ರೋದ್ಯಮಕ್ಕೆ ಲಕ್ಷ್ಮಿಯ ಕೃಪಾಕಟಾಕ್ಷ ದೊರೆತಿದೆ. ಕಂಕಣ ಕೈಯ ತಿರುವುತ ಲಕ್ಷ್ಮಿ ಬಾಲಿವುಡ್ ಅಂಗಳಕ್ಕೆ ಅಡಿಯಿಟ್ಟಿದ್ದಾಳೆ. ಅಮೀರ್ ಖಾನ್ ನಟನೆಯ 'ತ್ರಿ ಇಡಿಯಟ್ಸ್' ಚಿತ್ರ ಬಾಕ್ಸಾಫೀಸಲ್ಲಿ ಕನಕ ವೃಷ್ಟಿ ಕರೆಯುತ್ತಿದೆ. ಚಿತ್ರ ಬಿಡುಗಡೆಯಾದ 10 ದಿನಗಳಲ್ಲೇ 240 ಕೋಟಿ ರು.ಗಳನ್ನು ತ್ರಿ ಇಡಿಯಟ್ಸ್ ಚಿತ್ರ ಬಾಚಿಕೊಂಡಿದೆ. ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 'ತ್ರಿ ಇಡಿಯಟ್ಸ್' ಗೆಲುವಿನ
ಜ.22ಕ್ಕೆ ವಿಷ್ಣು ಕೊನೆಯ ಚಿತ್ರ...
2010-01-05 05:36
ಸಾಹಸ ಸಿಂಹ ವಿಷ್ಣುವರ್ಧನ್ ಅಭಿನಯದ ಕೊನೆಯ ಅದ್ದೂರಿ ಚಿತ್ರ 'ಆಪ್ತರಕ್ಷಕ' ಜನವರಿ 22ರಂದು ರಾಜ್ಯಾದ್ಯಂತ ತೆರೆಕಾಣಲು ಅಣಿಯಾಗಿದೆ. ಹಾಗೆಯೇ 'ಆಪ್ತರಕ್ಷಕ' ಚಿತ್ರದ ಧ್ವನಿಸುರುಳಿ ಜನವರಿ15ರಂದು ಮಾರುಕಟ್ಟೆಗೆ ಬಿಡುಗಡೆಯಾಗಲಿದೆ ಎಂದು ಚಿತ್ರದ ನಿರ್ಮಾಪಕ ಕೃಷ್ಣಪ್ರಜ್ವಲ್ ತಿಳಿಸಿದ್ದಾರೆ.ನವೆಂಬರ್ ತಿಂಗಳಲ್ಲೇ ತೆರೆಕಾಣಬೇಕಾಗಿದ್ದ 'ಆಪ್ತರಕ್ಷಕ' ರಾಜ್ಯದಲ್ಲಿ ಉಂಟಾದ ಪ್ರವಾಹದ ಕಾರಣ ಮುಂದೂಡಲಾಗಿತ್ತು. ನೆರೆಯ ಕಾರಣ ರಾಜ್ಯ ತತ್ತರಿಸುತ್ತಿರುವ ಸಂಧರ್ಭದಲ್ಲಿ ಆಪ್ತರಕ್ಷಕ ಚಿತ್ರವನ್ನು ಬಿಡುಗಡೆ
ಪಮೇಲಾ ಆಂಡರ್ಸನ್ ಪೂರ್ಣಕುಂಭ...
2010-01-04 09:35
ಲಂಡನ್, ಜ. 4 : ಪ್ರಳಯವೇನೂ ಸಂಭವಿಸಲಿಲ್ಲ, ಆದರೂ ಕೆಲವು ನಿಮಿಷಗಳ ಕಾಲ ಅಲ್ಲಿ ಜಗತ್ತು ಫುಲ್ ಸ್ಟಾಪ್ ಆಯಿತು. ಗಡಿಯಾರದ ಮುಳ್ಳುಗಳು ಮುಂದೋಡುವುದಕ್ಕೆ ಹಿಂದೇಟು ಹಾಕಿದವು. ಬೆಕ್ಕಸ ಬೆರಗಾದ ಕಣ್ಣಾಲಿಗಳು ಅವಾಕ್ಕಾಗಿ ತದೇಕ ಚಿತ್ತದಿಂದ ದಿಟ್ಟಿಸುತ್ತಿದ್ದರೆ ರೆಪ್ಪೆಗಳು ಕೂಡ ತಮ್ಮ ಕಾರ್ಯ ಮರೆತು ಕಣ್ಣುಗಳ ಬೆಂಬಲಕ್ಕೆ ನಿಂತವು. ಆ ಕ್ಷಣ ಹಾಲಿವುಡ್ಡಿನ ಪ್ಯಾರಾಮೌಂಟ್ ಸ್ಟೂಡಿಯೋದಲ್ಲಿ ನೆರೆತವರೆಲ್ಲ
ಪೊಲೀಸ್ ಕ್ವಾರ್ಟರ್ಸ್ :...
2010-01-04 07:11
ನೈಜ ಘಟನೆ ಆಧರಿಸಿ ಸಿನಿಮಾ ಮಾಡುವುದು ಅಷ್ಟು ಸುಲಭವಲ್ಲ. ಒಂದು ಇಂಚು ಮಿಸ್ ಆದರೂ ಅಲ್ಲಿ ನಗೆಪಾಟಲು ಕಟ್ಟಿಟ್ಟ ಬುತ್ತಿ. ಆ ಮಟ್ಟಿಗೆ ಸೈನೈಡ್ ರಮೇಶ್ ಗೆದ್ದಿದ್ದಾರೆ. ಎಂದೋ ನಡೆದ ಗಲಾಟೆಯಲ್ಲಿ ಕಾಣೆಯಾದ ವ್ಯಕ್ತಿಯೊಬ್ಬನ ಹಿಂದೆ ಹೊರಟು, ಅವನ ಕತೆ ಎಂಬ ಕಂಬಕ್ಕೆ ಪ್ರೇಕ್ಷಕರನ್ನು ಕಟ್ಟಿಹಾಕುವ ಪರಿ ಅಚ್ಚರಿ ಮೂಡಿಸುತ್ತದೆ.ರಸ್ತೆ ಮಧ್ಯೆ ಬಾಬ್ರಿ ಮಸೀದಿ ವಿಷಯಕ್ಕೆ ಗಲಾಟೆ
ಮಿನುಗು :ನಿದ್ರೆಗೆ...
2010-01-03 09:25
ಮಿನುಗು: ಫಳಫಳನೆ ಹೊಳೆ, ಬಂಗಾರದ ಕಳೆ, ಶುಭ್ರತೆಯ ಎಳೆ ಎಂದರ್ಥ. ಇಲ್ಲಿ ಪೂಜಾ ಗಾಂಧಿ ಆ ಪದಕ್ಕೆ ಹೊಸ ಅರ್ಥ ಕೊಡುತ್ತಾರೆ. ನಾಯಕಿಯೊಬ್ಬಳ ಬದುಕಿನ ಕತೆಯೇ ಮಿನುಗು. ಪ್ರೇಕ್ಷಕ ಆ ನಾಯಕಿಯ ಬಗ್ಗೆ ಅಯ್ಯೋ ಪಾ...ಪ... ಎನ್ನುತ್ತಾನೆ. ನಾಯಕನ ಬಗ್ಗೆ ಶೋಕದ ಶ್ಲೋಕ ಹೇಳುತ್ತಾನೆ. ಸೆಂಟಿ`ಮೆಂಟಲ್' ಎನಿಸುವ ಚಿತ್ರಕತೆ, ಕುಂಟಾ ಬಿಲ್ಲೆ ಆಡುತ್ತ ಸಾಗುವ ನಿರೂಪಣೆ ನಿದ್ರೆಗೆ
ಜ.7 ರಿಂದ 13 ರ ವರೆಗೆ ಮಕ್ಕಳ...
2010-01-03 06:01
ಬೆಂಗಳೂರು, ಜ. 3 : 6ನೇ ಅಂತಾರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವ ಜನವರಿ 7 ರಿಂದ 13 ರ ವರಗೆ ನಗರದ ನಾನಾ ಕಡೆ ನಡೆಯಲಿದೆ. ಜನವರಿ 7 ರಂದು ಅಂಬೇಡ್ಕರ್ ಭವನದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಕಾರ್ಯಕ್ರಮ ಉದ್ಘಾಟಿಸುವರು. ಜ.8 ರಿಂದ 13 ವರಗೆ ಪ್ರತಿದಿನ ಬಾಲಭವನ ಮತ್ತು ಮೂವಿಲ್ಯಾಂಡ್ ನಲ್ಲಿ ಬೆಳಗ್ಗೆ 10, 12 ಹಾಗೂ ಮಧ್ಯಾಹ್ನ
ಕನ್ನಡ ಚಿತ್ರರಂಗದ ಜಮಾ...
2009-12-31 12:52
ಕಳೆದ ವರ್ಷದಂತೆ ಪ್ರಸಕ್ತ ವರ್ಷವೂ ಸ್ಯಾಂಡಲ್ ವುಡ್ ಪಾಲಿಗೆ ನಿರಾಶಾದಾಯಕ ವರ್ಷವಾಗಿ ಪರಿಣಮಿಸಿದೆ. ಎಲ್ಲೋ ಏಳೆಂಟು ಚಿತ್ರಗಳು ಹಿಟ್ ಆದರೆ ಮಿಕ್ಕೆಲ್ಲಾ ಚಿತ್ರಗಳು ಮಕಾಡೆ. ಬೇಡಿಕೆಯ ನಟರ ಚಿತ್ರಗಳೇ ತೋಪೆದ್ದು ಹೋಗಿದೆ. ಇದಕ್ಕೆ ವಿಷ್ಣುವರ್ಧನ್, ಶಿವರಾಜ್, ಗಣೇಶ್, ದರ್ಶನ್, ಉಪೇಂದ್ರ, ಪೂಜಾ ಗಾಂಧೀ ಯಾರ ಚಿತ್ರವೂ ಹೊರತಾಗಿಲ್ಲ.ಪರಭಾಷಾ ಚಿತ್ರಗಳ ಹಾವಳಿ, ಚಿತ್ರಮಂದಿರ ಬಾಡಿಗೆ ಹೆಚ್ಚಳ, ಕನ್ನಡ ಪ್ರೇಕ್ಷಕನ
ವರ್ಷದ ಗೀತರಚನೆಕಾರ ಯೋಗರಾಜ...
2009-12-31 11:19
ಹರಿಕೃಷ್ಣರ ಹೆಸರನ್ನು ’ವರ್ಷದ ಸಂಗೀತ ನಿರ್ದೇಶಕ’ ಸ್ಥಾನಕ್ಕೆ ಹೆಚ್ಚು ಯೋಚನೆಯಿಲ್ಲದೆ ಕೂರಿಸಬಹುದು. ’ಎದ್ದೇಳು ಮಂಜುನಾಥಾ’ದ ಅನೂಪ್ ಸೀಳಿನ್, ’ಸವಾರಿ’ಯ ಮಣಿಕಾಂತ್ ಕದ್ರಿ, ’ಪರಿಚಯ’ದ ಜೆಸ್ಸಿ ಗಿಫ್ಟ್, ’ಮನಸಾರೆ’ಯ ಮನೋಮೂರ್ತಿ ಕೂಡ ಯಶಸ್ಸು ಕಂಡಿದ್ದಾರಾದರೂ ಹರಿಕೃಷ್ಣರ ಯಶಸ್ಸು ಇವರೆಲ್ಲರಿಗೂ ಮಿಗಿಲಾದದ್ದು. ’ಅಂಬಾರಿ’, ’ಜಂಗ್ಲಿ’, ’ರಾಜ್’ ಹಾಗೂ ಇತ್ತೀಚಿನ ’ರಾಮ್’ ಚಿತ್ರದ ಗುನುಗುವ ಟ್ಯೂನ್‌ಗಳ ಸರದಾರ ಹರಿಕೃಷ್ಣ ಅವರೇ. ಹಾಗಾಗಿ
ದಾಂಧಲೆಗೆ ವಿಷ್ಣು...
2009-12-31 10:22
ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ ಅಂತಿಮ ಯಾತ್ರೆಯ ವೇಳೆ ನಡೆದ ದಾಂಧಲೆಯನ್ನು ಭಾರತಿ ವಿಷ್ಣುವರ್ಧನ್ ಅವರು ಖಂಡಿಸಿದ್ದಾರೆ. ಇದು ಯಾರೋ ಕಿಡಿಗೇಡಿಗಳು ಮಾಡಿದ ಕೃತ್ಯವೇ ಹೊರತು ಇದಕ್ಕೆ ವಿಷ್ಣು ಅಭಿಮಾನಿಗಳು ಕಾರಣರಲ್ಲ ಎಂದು ಅವರು ಗುರುವಾರ ಸ್ಪಷ್ಟೀಕರಿಸಿದರು. ವಿಷ್ಣು ಅಭಿಮಾನಿಗಳು ಈ ರೀತಿ ತಲೆ ತಗ್ಗಿಸುವ ಕೆಲಸ ಮಾಡುವವರಲ್ಲ. ಅವರು ಶಾಂತಿ ಪ್ರಿಯರು. ವಿಷ್ಣು ಅಭಿಮಾನಿಗಲು ಯಾರಿಗೂ
ಡಾ.ವಿಷ್ಣುವರ್ಧನ್ ಫಿಲ್ಮ್...
2009-12-31 09:17
ಹೈದರಾಬಾದ್ ನಲ್ಲಿರುವ ರಾಮೋಜಿ ಫಿಲ್ಮ್ ಸಿಟಿ ಮಾದರಿಯಲ್ಲಿ ಬೆಂಗಳೂರಿನ ಹೆಸರಘಟ್ಟದಲ್ಲಿ 'ಡಾ.ರಾಜ್ ಹಾಗೂ ವಿಷ್ಣುವರ್ಧನ್ ಫಿಲಂ ಸಿಟಿ' ನಿರ್ಮಿಸಲು ರಾಜ್ಯ ಸರಕಾರ ನಿರ್ಧರಿಸಿದೆ. ಒಂದೇ ಸೂರಿನಡಿ ಚಿತ್ರನಿರ್ಮಾಣಕ್ಕೆ ಸಂಬಂಧಿಸಿದ ಸಮಸ್ತ ಕೆಲಸಗಳನ್ನು ನಿರ್ವಹಿಸುವ ಸಾಧ್ಯತೆಗಳು ಸಾಕಾರಗೊಳ್ಳಲಿವೆ.ಈ ಬಗ್ಗೆ ಮಾತನಾಡಿದ ಪ್ರವಾಸೋದ್ಯಮ ಸಚಿವ ಜಿ ಜನಾರ್ದನರೆಡ್ಡಿ, ಫಿಲ್ಮ್ ಸಿಟಿ ಕುರಿತು ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ಆದಷ್ಟು ಶೀಘ್ರದಲ್ಲಿ ನಿರ್ಮಾಣ ಕಾರ್ಯ
ಬಿಪಾಶ ಗೆಜ್ಜೆ ನಾದಕ್ಕೆ...
2009-12-31 05:35
ಹೊಸ ವರ್ಷ ಹತ್ತಿರಾಗುತ್ತಿರುವಂತೆಯೇ ನಟ ನಟಿಯರಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಆದರೆ, ಬೇಡಿಕೆ ಬರುತ್ತಿರುವುದು ನಿರ್ಮಾಪಕರಿಂದಲ್ಲ. ರೆಸಾರ್ಟ್, ಕ್ಲಬ್ ಮಾಲೀಕರಿಂದ. ಖ್ಯಾತನಾಮರೆಲ್ಲರನ್ನು ಒಂದೆಡೆ ಗುಡ್ಡೆ ಹಾಕಿಕೊಂಡು ಪಡ್ಡೆ ಹುಡುಗರಿಗೆ ಕಿಕ್ ಕೊಡುವಂಥ ಹಾಡುಗಳ ಹಿಮ್ಮೇಳದಲ್ಲಿ ಪ್ರಸಿದ್ಧ ನಟ ನಟಿಯರನ್ನು ಕುಣಿಸಿ, ನೆರದವರ ಮನತಣಿಸಿ, ಹೊಸವರ್ಷವನ್ನು ಸ್ವಾಗತಿಸಿ ಕೈ ತುಂಬಾ 'ಮನಿ ' ಕಲೆಕ್ಟ್ ಮಾಡುವ ರೆಸಾರ್ಟ್ ಮಾಲೀಕರ ಐಡಿಯಾಕ್ಕೆ
ದಕ್ಷಿಣ ದಿಕ್ಕಿನಲ್ಲಿ...
2009-12-30 14:11
ಬೆಂಗಳೂರು, ಡಿ. 30 : ಕಳೆದ ಮೂವತ್ತೇಳು ವರ್ಷಗಳಿಂದ ಕನ್ನಡ ಸಿನಿಮಾ ಜಗತ್ತಿನಲ್ಲಿ ತನ್ನದೆ ಆದ ಛಾಪು, ಮತಾಪು ಮೂಡಿಸಿದ್ದ ಮೈಸೂರಿನ ಸಂಪತ್ ಕುಮಾರ್ ಅಲಿಯಾಸ್ ಸಾಹಸಸಿಂಹ ಡಾ ವಿಷ್ಣುವರ್ಧನ್ ಅವರು ಪಂಚಭೂತಗಳಲ್ಲಿ ಲೀನವಾದರು. ಮೈಸೂರು ರಸ್ತೆಗೆ ಹೊಂದಿಕೊಂಡಿರುವ ಉತ್ತರಹಳ್ಳಿಯಲ್ಲಿರುವ ಬಾಲಣ್ಣ ಅವರ ಅಭಿಮಾನ್ ಸ್ಟುಡಿಯೋದಲ್ಲಿ ಸಕಲ ಸರಕಾರಿ ಗೌರವಗಳೊಂದಿಗೆ ಹಿಂದೂ ಧರ್ಮದ ವಿಧಿವಿಧಾನದ ಮೂಲಕ ಅಂತಿಮ
ವಿಷ್ಣು ಕನಸು ನನಸು ಮಾಡದ...
2009-12-30 11:44
ನವದೆಹಲಿ, ಡಿ. 30 : ನಟ ವಿಷ್ಣುವರ್ಧನ್ ಅವರ ಅಕಾಲಿಕ ನಿಧನಕ್ಕೆ ಭಾರತದ ವಿದೇಶಾಂಗ ಸಚಿವ ಎಸ್ ಎಂ ಕೃಷ್ಣ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ವಿಷ್ಣುವರ್ಧನ್ ಸಜ್ಜನಿಕೆ ನಟ ಮತ್ತು ಸ್ನೇಹಿತ. ಕೃಷ್ಣ ರಾಜಕಾರಣದ ಅತ್ಯಂತ ಗಂಭೀರ ಸ್ವಭಾವದ ವ್ಯಕ್ತಿ ಮತ್ತು ವ್ಯಕ್ತಿತ್ವ. ಆದರೆ, ಸಾಹಸಸಿಂದ ವಿಷ್ಣುವರ್ಧನ್ ಅವರ ಸಾವಿನ ಸಂದರ್ಭದಲ್ಲಿ ತಮ್ಮ ನೆನಪಿನಾಳವನ್ನು ಬಿಚ್ಚಿಟ್ಟ ಅವರು,
ವಿಷ್ಣುವರ್ಧನ್ ಗೆ ತಟ್ಟಿತೆ...
2009-12-30 11:37
'ಆಪ್ತಮಿತ್ರ' ಚಿತ್ರ ಬಿಡುಗಡೆಯಾಗುವುದಕ್ಕೂ ಮುನ್ನ ನಟಿ ಸೌಂದರ್ಯ ಸಾವಪ್ಪಿದ್ದರು. ಇದೀಗ 'ಆಪ್ತಮಿತ್ರ' ಚಿತ್ರದ ಮುಂದುವರಿದ ಭಾಗ 'ಆಪ್ತರಕ್ಷಕ' ಬಿಡುಗಡೆಗೆ ಸಜ್ಜಾಗಿದೆ. ಕಾಕತಾಳೀಯ ಎಂಬಂತೆ ಚಿತ್ರ ಬಿಡುಗಡೆಗೂ ಮುನ್ನ ವಿಷ್ಣುವರ್ಧನ್ ಸಾವಪ್ಪಿರುವುದು ನಿಜಕ್ಕೂ ವಿಷಾದನೀಯ. ಕೇಳಲು ಬಾಲೀಶ ಅನ್ನಿಸಿದರೂ ಇದೆಲ್ಲಾ ನಾಗವಲ್ಲಿಯ ಶಾಪ ಅನ್ನಿಸುವುದಿಲ್ಲವೆ? ಪ್ರತ್ಯಕ್ಷವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ವಿಷ್ಣುವರ್ಧನ್ ಅವರಿಗೆ ನಾಗವಲ್ಲಿ ಕಾಟ ಕೊಟ್ಟಿದ್ದರು. ಇದನ್ನು ಸ್ವತಃ
ನ್ಯಾಷನಲ್ ಮೈದಾನದ...
2009-12-30 11:26
ಬೆಂಗಳೂರು, ಡಿ. 30 : ವಿಧಿವಶರಾಗಿರುವ ಸಾಹಸಸಿಂಹ ವಿಷ್ಣುವರ್ಧನ್ ಅವರ ಅಂತಿಮ ದರ್ಶನಕ್ಕಾಗಿ ಬಸವನಗುಡಿಯ ನ್ಯಾಷನಲ್ ಕಾಲೇಜಿನ ಮೈದಾನದ ಬಳಿ ಸಾವಿರಾರು ಸಂಖ್ಯೆಯಲ್ಲಿ ನೆರೆದಿರುವ ಅಭಿಮಾನಿಗಳ ಆಕ್ರೋಶ ಮುಗಿಲು ಮುಟ್ಟಿದೆ. ನ್ಯಾಷನಲ್ ಕಾಲೇಜು, ಡಿವಿಜಿ ರಸ್ತೆ, ರಾಮಕೃಷ್ಣ ಆಶ್ರಮದ ಬಳಿ ನೆರೆದಿರುವ ವಿಷ್ಣು ಅಭಿಮಾನಿಗಳು ತಮ್ಮ ಆಕ್ರೋಶವನ್ನು ಪೊಲೀಸರ ಮೇಲೆ, ಅಲ್ಲಿ ನಿಲ್ಲಿಸಲಾಗಿದ್ದ ವಾಹನಗಳ ಮೇಲೆ ಮತ್ತು
ವಿಷ್ಣುವರ್ಧನ್ ಅಂತಿಮ...
2009-12-30 11:09
ಬೆಂಗಳೂರು, ಡಿ. 30 : ಬಸವನಗುಡಿ ನ್ಯಾಶನಲ್ ಕಾಲೇಜಿನಲ್ಲಿ ಅಂತಿಮ ದರ್ಶನದ ಬಳಿಕ ಸಾಹಸಸಿಂಹ ವಿಷ್ಣುವರ್ಧನ್ ಅಂತಿಮಯಾತ್ರೆ ಪ್ರಾರಂಭವಾಗಿದೆ. ಉತ್ತರಹಳ್ಳಿಯಲ್ಲಿರುವ ಬಾಲಣ್ಣನ ಅಭಿಮಾನ್ ಸ್ಟುಡಿಯೋದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.ಬನಶಂಕರಿ ಮತ್ತು ಪದ್ಮನಾಭನಗರ ಮುಖಾಂತರವಾಗಿ ಉತ್ತರಹಳ್ಳಿಯ ಅಭಿಮಾನ್ ಸ್ಟುಡಿಯೋ ತಲುಪಲಿದೆ. ಅಲ್ಲಿ ಅಭಿಮಾನ್ ಸ್ಟುಡಿಯೋ ಅಭಿಮಾನದಿಂದ ವಿಷ್ಣುಗೆ ನೀಡಿರುವ ಎರಡು ಎಕರೆ ಜಮೀನಿನಲ್ಲಿ ವಿಷ್ಣು ಪಂಚಭೂತಗಳಲ್ಲಿ ವಿಲೀನರಾಗಲಿದ್ದಾರೆ. ದಾರಿಗುಂಟ ಯಾವುದೇ
ಬಾಲಣ್ಣನ ಹೃದಯದಲ್ಲಿ...
2009-12-30 10:13
ಮೈಸೂರು ರಸ್ತೆ ಬಳಿಯ ಉತ್ತರ ಹಳ್ಳಿ ರಸ್ತೆಗೆ ಹೊಂದಿಕೊಂಡಿರುವ ಅಭಿಮಾನ್ ಸ್ಟುಡಿಯೋದಲ್ಲಿ ಡಾ.ವಿಷ್ಣುವರ್ಧನ್ ಅವರ ಸ್ಮಾರಕ ನಿರ್ಮಿಸಲು ಕರ್ನಾಟಕ ಸರಕಾರ ತೀರ್ಮಾನಿಸಿದೆ. ಬುಧವಾರ ಸಂಜೆ ಅಭಿಮಾನ್ ಸ್ಟುಡಿಯೋದಲ್ಲಿ ವಿಷ್ಣುವರ್ಧನ್ ಅವರ ಅಂತ್ಯಕ್ರಿಯೆ ನೆರವೇರಲಿದೆ. ಹಾಗಂತ ಕಲಾವಿದರ ಸಂಘದ ಅಧ್ಯಕ್ಷ ಅಂಬರೀಷ್ ತಿಳಿಸಿದ್ದಾರೆ. ಅಭಿಮಾನ್ ಸ್ಟುಡಿಯೋದ 2 ಎಕರೆ ಜಮೀನಿನಲ್ಲಿ ಸುಮಾರು ರು.10 ಕೋಟಿ
ಮೈಸೂರು : ವಿಷ್ಣು ಅಭಿಮಾನಿ...
2009-12-30 10:10
ಬೆಂಗಳೂರು/ಮೈಸೂರು ಡಿ. 30 : ಜನನಾಯಕ ವಿಷ್ಣುವರ್ಧನ್ ಅವರ ಅಕಾಲಿಕ ನಿಧನದಿಂದ ಮೈಸೂರು ಮತ್ತು ಬೆಂಗಳೂರಿನಲ್ಲಿ ಉದ್ರಕ್ತ ವಾತಾವರಣ ಉಂಟಾಗಿದೆ. ಬೆಂಗಳೂರಿನಲ್ಲಿ ಅಶ್ರವಾಯು, ಗಾಳಿಯಲ್ಲಿ ಗುಂಡು ಹಾರಿಸಿರುವ ಘಟನೆ ನಡೆದರೆ, ಅತ್ತ ಮೈಸೂರು ಜಿಲ್ಲೆಯ ಟಿ ನರಸೀಪುರ ತಾಲ್ಲೂಕಿನ ಕುಪ್ಯ ಗ್ರಾಮದಲ್ಲಿ ವಿಷ್ಣು ಅವರ ಅಭಿಮಾನಿ ಬಾವಿಗೆ ಹಾರಿ ಅತ್ಮಹತ್ಯೆ ಮಾಡಿಕೊಂಡಿದ್ದು, ಆತನನ್ನು ರಕ್ಷಿಸಲು ಹೋದ ಮತ್ತೊಬ್ಬ
ಕಂಠೀರವದಲ್ಲಿ ರಾಜ್, ಅಭಿಮಾನ್...
2009-12-30 08:28
ಬೆಂಗಳೂರು, ಡಿ. 30 : ವಿಷ್ಣುವರ್ಧನ್ ಅವರ ಅಂತ್ಯಕ್ರಿಯೆಯನ್ನು ಬಾಲಕೃಷ್ಣ ಅವರ ಅಭಿಮಾನ್ ಸ್ಟುಡಿಯೋದಲ್ಲಿ ನಡೆಸಲು ಭಾರತಿ ವಿಷ್ಣುವರ್ಧನ್ ಅವರು ಸಮ್ಮತಿಸಿದ್ದಾರೆ. ಮುಖ್ಯಮಂತ್ರಿ ಯಡಿಯೂರಪ್ಪ ಕೂಡಾ ವಿಷ್ಣುವರ್ಧನ್ ಅವರ ಅಂತ್ಯಕ್ರಿಯೆನ್ನು ಅಭಿಮಾನದಲ್ಲಿ ನಡೆಸಲು ಸರಕಾರಿ ಸಿದ್ಧತೆಗಳನ್ನು ಮಾಡಿಕೊಳ್ಳಲು ಸೂಚನೆ ನೀಡಿದ್ದಾರೆ. ನಟಸಾರ್ವಭೌಮ ಡಾ ರಾಜ್ ಕುಮಾರ್ ತೀರಿ ಹೋದಾಗಲೂ ಅವರ ಅಂತ್ಯಕ್ರಿಯೆ ಎಲ್ಲಿ ನಡೆಸಬೇಕು ಎಂದು ಜಿಜ್ಞಾಸೆ
ವಿಷ್ಣುವರ್ಧನ್ ಜೀವನ...
2009-12-30 08:19
ಮೂಲನಾಮ : ಸಂಪತ್ ಕುಮಾರ್ಚಿತ್ರರಂಗದ ಹೆಸರು : ವಿಷ್ಣುವರ್ಧನ್ (ಇಟ್ಟಿದ್ದು ಪುಟ್ಟಣ್ಣ ಕಣಗಾಲ್, ನಾಗರಹಾವು ಚಿತ್ರದಲ್ಲಿ)ಜನನ : ಸೆ. 18, 1950, ನಿಧನ: ಡಿ. 30, 2009ಜನ್ಮಸ್ಥಳ : ಚಾಮುಂಡಿಪುರಂ,ಮೈಸೂರುಕುಟುಂಬ : ವೈದಿಕ ಕುಟುಂಬತಂದೆ : ಎಚ್ ಎಲ್ ನಾರಾಯಣ ರಾವ್ತಾಯಿ : ಕಮಲಾಕ್ಷಮ್ಮಅಣ್ಣ : ರವಿಕುಮಾರ್ತಂಗಿ : ಇಂದ್ರಾಣಿಅಕ್ಕ : ಜಯಶ್ರೀತಂಗಿ : ಪೂರ್ಣಿಮಾತಂಗಿ :
2009: ಸೋಲು,ಸಾವಿನ ಸಂವತ್ಸರ
2009-12-30 07:54
ಕನ್ನಡ ಚಿತ್ರರಂಗ ವ್ಯಾವಹಾರಿಕವಾಗಿ ಕಷ್ಟ ನಷ್ಟ ಅನುಭವಿಸುವುದು ಸಾಮಾನ್ಯ ಸಂಗತಿ ಎನಿಸಿದೆ. 2009 ರ ಸಾಲಿನಲ್ಲೂ ಚಿತ್ರಗಳು ಸಾಲುಸಾಲಾಗಿ ಸೋತು ಅನೇಕ ನಿರ್ಮಾಪಕರು ಕೈಸುಟ್ಟುಕೊಂಡಿದ್ದಾರೆ. ಇದು ನಮ್ಮ ಉದ್ಯಮಿಗಳ ಅವ್ಯಾವಹಾರಿಕ ಮನೋಭಾವ ಮತ್ತು ಕನ್ನಡಿಗರ ಅಸಡ್ಡೆಗೆ ಹಿಡಿದ ಕೈಗನ್ನಡಿಯಾಗಿದೆ.ಚಿತ್ರರಂಗದ ನಾನಾ ಕ್ಷೇತ್ರಗಳಲ್ಲಿ ದುಡಿದ ಕಲಾವಿದ, ತಂತ್ರಜ್ಞರಿಗೆ ಪ್ರಶಸ್ತಿ, ಪುರಸ್ಕಾರ, ಸಂಭಾವನೆ ವಿಷಯ ಹಾಗಿರಲಿ. ಅನೇಕರ
ಕುಸಿದು ಬಿದ್ದ ಭಾರತಿ, ಜಯಂತಿ
2009-12-30 07:31
ಬೆಂಗಳೂರು, ಡಿ. 30 : ಪತಿ ವಿಷ್ಣುವರ್ಧನ್ ನಿಧನದಿಂದ ತೀವ್ರ ಒತ್ತಡಕ್ಕೊಳಗಾಗಿರುವ ಪತ್ನಿ ಭಾರತಿ ಅವರು ಕುಸಿದು ಬಿದ್ದು ಆಸ್ಪತ್ರೆ ದಾಖಲಾಗಿರುವ ಘಟನೆ ನಡೆದಿದೆ. ಅತ್ತ ನಟಿ ಜಯಂತಿ ಕೂಡಾ ವಿಷ್ಣು ನಿಧನ ಸುದ್ದಿ ತಿಳಿದು ಅಘಾತಕ್ಕೊಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಬಸವನಗುಡಿ ಮೇಲ್ಸೇತುವೆ ಬಳಿ ನಡೆದ ನೂಕುನುಗ್ಗಲಿನಲ್ಲಿ ಒಬ್ಬ ವ್ಯಕ್ತಿ ಗಂಭೀರವಾಗಿ ಗಾಯಗೊಂಡಿರುವ ಘಟನೆಯೂ ನಡೆದಿದೆ. ನ್ಯಾಷನಲ್
ಶಾಂತಿ ಕಾಪಾಡಿ, ಸಿಎಂ, ಭಾರತಿ
2009-12-30 07:02
ಬೆಂಗಳೂರು, ಡಿ. 30 : ಜನನಾಯಕ ವಿಷ್ಣುವರ್ಧನ್ ಅವರ ನಿಧನದಿಂದ ತುಂಬಾ ನೋವಾಗಿದೆ. ಕನ್ನಡ ಚಿತ್ರರಂಗ ಬಡವಾಗಿದೆ. ಅವರ ಅಗಲಿಕೆ ನಮಗೆ ಭರಿಸಲಾರದ ಆಘಾತವಾಗಿದೆ. ಸ್ನೇಹ ಜೀವಿ, ಶಾಂತಿ ಪ್ರಿಯರಾಗಿದ್ದ ಅವರ ಅಂತ್ಯಕ್ರಿಯೆ ಶಾಂತಿ ಮೂಲಕ ಆಚರಿಸೋಣ. ಅಭಿಮಾನಿಗಳು ಶಾಂತಿ, ಸಹಕಾರ ನೀಡಬೇಕು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಮನವಿ ಮಾಡಿಕೊಂಡಿದ್ದಾರೆ. ಕೋಟ್ಯಂತರ ಅಭಿಮಾನಿಗಳನ್ನು ಹೊಂದಿರುವ ವಿಷ್ಣುವರ್ಧನ್ ಅವರ
ಅಭಿನಯದ ಮಲಯ ಮಾರುತ...
2009-12-30 06:56
ರಾಮಾಚಾರಿ, ಸಾಹಸಸಿಂಹ, ಅಭಿನಯ ಭಾರ್ಗವ ಡಾ. ವಿಷ್ಣುವರ್ಧನ್ ಅವರ ಅಗಲಿಕೆಯನ್ನು ಪದಗಳಲ್ಲಿ ವರ್ಣಿಸುವುದು ಸಾಧ್ಯವೇ ಇಲ್ಲ. ಬಹುಶಃ ಡಾ. ರಾಜಕುಮಾರ್ ಅವರ ನಂತರ ಕನ್ನಡ ಚಿತ್ರರಂಗ ಕಂಡ ಅತ್ಯಂತ ಪ್ರತಿಭಾವಂತ, ಹೃದಯವಂತ, ಪ್ರೀತಿಪಾತ್ರ ನಟ ಕನ್ನಡ ಚಿತ್ರರಂಗದಲ್ಲಿ ಸಿಗಲಿಕ್ಕಿಲ್ಲ, ಸಿಗುವುದೂ ಇಲ್ಲ.ಡಿಸೆಂಬರ್ 29ರಂದು ಹುಟ್ಟುಹಬ್ಬದಂದೇ ವಿಧಿವಶರಾದ ಸಿ ಅಶ್ವತ್ಥ್ ಅವರ ಅಗಲಿಕೆಯನ್ನು ಅರಗಿಸಿಕೊಳ್ಳುವ ಮೊದಲೇ ರಾಜ್ಯಕ್ಕೆ ಸಾಹಸಸಿಂಹ
ತುತ್ತು ಅನ್ನ ತಿನ್ನೋಕೆ...
2009-12-30 06:51
ವಿಷ್ಣುವರ್ಧನ್ ಅವರು ಅದ್ಭುತವಾಗಿ ಹಾಡಿರುವ ಈ ಹಾಡು, 1982ರಲ್ಲಿ ತೆರೆಕಂಡ `ಜಿಮ್ಮಿಗಲ್ಲು’ ಚಿತ್ರದ್ದು. ಸಾಹಿತಿ ವೇಣುಗೋಪಾಲ ಕಾಸರಗೋಡು ಅವರ ಕಾದಂಬರಿ ಆಧರಿಸಿ ತೆಗೆದ ಸಿನಿಮಾ ಜಿಮ್ಮಿಗಲ್ಲು. ಜೀವನವೆಂಬ ಹೋರಾಟದಲ್ಲಿ ಎಡವಿಬಿದ್ದ; ಸೋಲಿನಿಂದ ತತ್ತರಿಸಿಹೋದ; ಮುಂದೇನು ಎಂದು ತಿಳಿಯದೆ ಕಕ್ಕಾಬಿಕ್ಕಿಯಾದ ಎಲ್ಲರಿಗೂ ಧೈರ್ಯ ಹೇಳುವಂತಿರುವುದು `ತುತ್ತು ಅನ್ನ ತಿನ್ನೋಕೆ’ ಹಾಡಿನ ಹೆಚ್ಚುಗಾರಿಕೆ. ತುತ್ತು ಅನ್ನ ತಿನ್ನೋಕೆ ಬೊಗಸೇ ನೀರು
ತುತ್ತು ಅನ್ನ ತಿನ್ನೋಕೆ ಹಾಡು...
2009-12-30 06:27
ಒಂದಲ್ಲ ಒಂದು ಸಂದರ್ಭದಲ್ಲಿ ಎಲ್ಲರಿಗೂ ಇಂಥ ಅನುಭವವಾಗಿರುತ್ತದೆ. ಏನೆಂದರೆ, ತುಂಬ ನಿಷ್ಠೆಯಿಂದ ದುಡಿದ ಕಂಪನಿಯಲ್ಲೇ ಅವಮಾನವಾಗಿಬಿಡುತ್ತದೆ, ನೌಕರಿ ಹೋಗುತ್ತದೆ ಅಥವಾ ಯಾರದೋ ಕುತಂತ್ರದ ಕಾರಣಕ್ಕೆ ಹುಟ್ಟಿದ ಊರಲ್ಲಿ ಮರ್ಯಾದೆ ಹೋಗುತ್ತದೆ. ಊರ ಮಂದಿಯಿಂದ `ಬಹಿಷ್ಕಾರ’ದ ಬಹುಮಾನ ಸಿಗುತ್ತದೆ. ಇನ್ನು ಕೆಲವೊಂದು ಸಂದರ್ಭಗಳಲ್ಲಿ ಕ್ಷುಲ್ಲಕ ಕಾರಣಕ್ಕೆ ಮನೆಮಂದಿಯೋ, ಬಂಧುಗಳೋ ಅವಮಾನಿಸಿರುತ್ತಾರೆ. ನಮ್ಮ ಪ್ರತಿ ನಡೆಯನ್ನೂ ಅನುಮಾನದಿಂದ ನೋಡಿರುತ್ತಾರೆ. ಅಷ್ಟೇ
ವಿಷ್ಣು ನಿಧನ: ಅಂಧ...
2009-12-30 05:03
ಬೆಂಗಳೂರು, ಡಿ. 30 : ಸಾಹಸಸಿಂಹ ವಿಷ್ಣುವರ್ಧನ್ ಅವರ ನಿಧನದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಭಾರಿ ಕಟ್ಟೆಚ್ಚರ ವಹಿಸಲಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳ ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ವಿಎಸ್ ಆಚಾರ್ಯ ಹೇಳಿದ್ದಾರೆ. ಇದರ ಬೆನ್ನಲ್ಲೇ ಬೆಂಗಳೂರಿನ ಮಾಗಡಿ ರಸ್ತೆ ಹಾಗೂ ಸುಂಕದಕಟ್ಟೆಯಲ್ಲಿ ಅಭಿಮಾನಿಗಳು ಗಲಾಟೆ ಆರಂಭಿಸಿದ್ದು, ಬಸ್ ಗಳಿಗೆ ಕಲ್ಲು ತೂರಾಟ ನಡೆಸಿ
ವಿಷ್ಣುವರ್ಧನ್ ಅಂತಿಮ...
2009-12-30 04:23
ಸಾಹಸಸಿಂಹ ವಿಷ್ಣುವರ್ಧನ್ ಅವರ ಪಾರ್ಥೀವ ಶರೀರದ ಮೆರವಣಿಗೆ ಜಯನಗರ ಶಾಪಿಂಗ್ ಕಾಂಪ್ಲೆಸ್ ಮಾರ್ಗವಾಗಿ ಬಸವನಗುಡಿ ನ್ಯಾಶನಲ್ ಕಾಲೇಜು ಮೈದಾನಕ್ಕೆ ಹೊರಡುತ್ತಿದೆ. ಜಯನಗರ, ಕೆನರಾಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಆನೆಬಂಡೆ ಹಾಗೂ ಆರ್ಮುಗಂ ರಸ್ತೆ ಮೂಲಕ ವಿಷ್ಣು ಅಂತಿಮ ಯಾತ್ರೆ ಸಾಗಲಿದೆ. ಬುಧವಾರ ಸಂಜೆ 4 ಗಂಟೆ ನಂತರ ಬನಶಂಕರಿ ಚಿತಾಗಾರದಲ್ಲಿ ವಿಷ್ಣುವರ್ಧನ್ ಅವರ ಅಂತ್ಯಕ್ರಿಯೆಯನ್ನು ನೆರವೇರಿಸಲಾಗುತ್ತದೆ ಎಂದು ವಿಷ್ಣು
ವಿಷ್ಣು ನಿಧನಕ್ಕೆ ನಿಮ್ಮ...
2009-12-30 03:38
ಕನ್ನಡ ತೆರೆಯ ಹಿರಿಯ ಕಲಾವಿದ ಡಾ. ವಿಷ್ಣುವರ್ಧನ್ ಬುಧವಾರ ಮುಂಜಾನೆ ಮೈಸೂರಿನಲ್ಲಿ ನಿಧನರಾದರು. ಅವರ ನಿಧನದೊಂದಿಗೆ ಕನ್ನಡ ಚಿತ್ರರಂಗವನ್ನು ಬೆಳಗಿದ ಹಿರಿಯ ನಾಯಕ ನಟನೊಬ್ಬನನ್ನು ಕಳೆದುಕೊಂಡಂತಾಗಿದೆ. ಬುಧವಾರ ರಾತ್ರಿ ಹೃದಯಾಘಾತಕ್ಕೆ ಈಡಾದ ವಿಷ್ಣು ಅವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಲಾಯಿತು. ಚಿಕಿತ್ಸೆಗಳು ಫಲಕಾರಿಯಾಗದೆ ನಸುಕಿನ 2.30ಕ್ಕೆ ಅವರು ಕೊನೆಯುಸಿರೆಳೆದರು.ಇದು ಚಿತ್ರರಂಗಕ್ಕೆ ಮಾತ್ರವಲ್ಲ ಕನ್ನಡ ಚಿತ್ರರಂಗವನ್ನು ಪ್ರೀತಿಸಿದ ಪ್ರತಿಯೊಬ್ಬರಿಗೂ ತುಂಬಲಾರದ
ಸಾಹಸಸಿಂಹ ಡಾ.ವಿಷ್ಣುವರ್ಧನ್...
2009-12-30 03:01
ಕನ್ನಡ ಚಿತ್ರರಂಗದ ಮೇರು ನಟ, ಸಾಹಸಸಿಂಹ ಡಾ.ವಿಷ್ಣುವರ್ಧನ್(59) ಅವರು ಇನ್ನು ಬರಿ ನೆನಪು ಮಾತ್ರ. ಮೈಸೂರಿನಲ್ಲಿದ್ದ ವಿಷ್ಣುವರ್ಧನ್ ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡ ಕಾರಣ ತಕ್ಷಣ ಅವರನ್ನು ಮೈಸೂರಿನ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಯಿತು. ಬುಧವಾರ (ಡಿ.30) ಮುಂಜಾನೆ 2.30ರ ಸಮಯದಲ್ಲಿ ಅವರು ತೀವ್ರ ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ವಿಕ್ರಂ ಆಸ್ಪತ್ರೆ ಮೂಲಗಳು ತಿಳಿಸಿದವು.ದೀರ್ಘ ಕಾಲದಿಂದ ವಿಷ್ಣುವರ್ಧನ್
'ಮತ್ತೆ ಮುಂಗಾರಿ'ನಲ್ಲಿ ಆಶಾ...
2009-12-29 11:24
ಹಾಡು ಕೋಗಿಲೆ ಆಶಾ ಭೋಂಸ್ಲೆ ಅವರನ್ನು ಕನ್ನಡಕ್ಕೆ ಕರೆತರುವ ಪ್ರಯತ್ನ ಪ್ರಗತಿಯಲ್ಲಿದೆ. ಇ ಕೃಷ್ಣಪ್ಪ ನಿರ್ಮಿಸುತ್ತಿರುವ ಮುಂದಿನ ಚಿತ್ರ 'ಮತ್ತೆ ಮುಂಗಾರು' ಚಿತ್ರಕ್ಕಾಗಿ ಆಶಾ ಅವರನ್ನು ಕರೆತರಲು ಶತ ಪ್ರಯತ್ನ ಮಾಡುತ್ತಿದ್ದಾರೆ. ಪ್ರತಾಪ್ ಗೌಡ ಎಂಬುವವರು ಈ ಹಿಂದೆ ತಮ್ಮ 'ಉದ್ಯಾನ್ ಎಕ್ಸ್ ಪ್ರೆಸ್' ಚಿತ್ರಕ್ಕೆ ಆಶಾ ಅವರನ್ನು ಕರೆತರುವ ಪ್ರಯತ್ನ ಮಾಡಿದ್ದರು.
ಕಿರುತೆರೆಗೆ ಅಡಿಯಿಟ್ಟ...
2009-12-29 10:38
ಕನ್ನಡ ಚಲನಚಿತ್ರರಂಗದ ಅಗ್ರಗಣ್ಯ ನಾಯಕ ನಟ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಇದೇ ಮೊಟ್ಟ ಮೊದಲ ಬಾರಿಗೆ ಕಿರುತೆರೆ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಇವರನ್ನು ಬರಮಾಡಿಕೊಳ್ಳುವಲ್ಲಿ ಯಶಸ್ವಿಯಾದ ವಾಹಿನಿ, ಜೀ ಕನ್ನಡ ವಾಹಿನಿ. ಜೀ ಕನ್ನಡದ ಸರಿಗಮಪ ಚಾಲೆಂಜ್ ಸಂಗೀತ ಸಮರಕ್ಕೆ ಹ್ಯಾಟ್ರಿಕ್ ಹೀರೋ ಮುಖ್ಯ ಆಥಿತಿಯಾಗಿ ಆಗಮಿಸಿದ್ದರು. ಸಂಗೀತಾಧಾರಿತ ’ಸರಿಗಮಪ’ ಜನಪ್ರಿಯ ಕಾರ್ಯಕ್ರಮಗಳಲ್ಲೊಂದಾಗಿದ್ದು ಖ್ಯಾತ ಸಂಗೀತ ನಿರ್ದೇಶಕ
ಗಾಯಕ ಸಿ ಅಶ್ವಥ್ ಗೆ ಅಂತಿಮ...
2009-12-29 10:05
ಗಾಯಕ ಸಿ ಅಶ್ವಥ್ ಅವರ ಪಾರ್ಥೀವ ಶರೀರವನ್ನು ರವೀಂದ್ರ ಕಲಾಕ್ಷೇತ್ರದ ಸಂಸ ಬಯಲು ರಂಗಮಂದಿರದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇಡಲಾಗಿದೆ. ಮಂಗಳವಾರ ಮಧ್ಯಾಹ್ನ 3ಗಂಟೆಯಿಂದ ಸಾರ್ವಜನಿಕರು ಅಶ್ವಥ್ ಅವರ ಪಾರ್ಥೀವ ಶರೀರದ ದರ್ಶನ ಪಡೆದು ಅಂತಿಮ ನಮನ ಸಲ್ಲಿಸಿದರು. ಯಶವಂತಪುರ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಿಂದ ಅವರ ಪಾರ್ಥೀವ ಶರೀರವನ್ನು ಎನ್ ಆರ್ ಕಾಲೋನಿಯ ಅವರ ಸ್ವಗೃಹಕ್ಕೆ ಕೊಂಡೊಯ್ಯಲಾಯಿತು. ಆನಂತರ
'ಪ್ರಾರ್ಥನೆ'ಗೆ ಕೈಜೋಡಿಸಿದ...
2009-12-29 09:25
ಸದಾಶಿವ ಶೆಣೈ ನಿರ್ದೇಶಿಸುತ್ತಿರುವ 'ಪ್ರಾರ್ಥನೆ' ಚಿತ್ರದಲ್ಲಿ ನಟ ಪ್ರಕಾಶ್ ರೈಅಭಿನಯಿಸಲು ಸಮ್ಮತಿ ಸೂಚಿಸಿದ್ದಾರೆ. 'ಪ್ರಾರ್ಥನೆ' ಚಿತ್ರದಲ್ಲಿ ಕಾರಣಾಂತರಗಳಿಂದ ನಟಿಸುತ್ತಿಲ್ಲ ಎಂದು ಸುಧಾರಾಣಿ ಇತ್ತೀಚೆಗಷ್ಟೇ ಪ್ರಕಟಿಸಿದ್ದರು. ಇದೇ ಕೊರಗಿನಲ್ಲಿದ್ದ ಶೆಣೈ ಅವರಿಗೆ ಪ್ರಕಾಶ್ ರೈ ಆಗಮನ ಸಂತಸ ತಂದಿದೆಯಂತೆ.ಇಂಡಿಯನ್ ಇನಿಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನಲ್ಲಿ ಭಾನುವಾರ ನಡೆದ 'ಜೋಗಿ ' ಅವರ ಪುಸ್ತಕ ಬಿಡುಗಡೆ
ನಾಡ ರೈತ ಗೀತೆ ನೇಗಿಲ ಯೋಗಿ...
2009-12-29 07:34
'ನೇಗಿಲ ಯೋಗಿ' ಕವನವನ್ನು ರಾಷ್ಟ್ರಕವಿ ಕುವೆಂಪು ಅವರು 1930ರಲ್ಲಿ ರಚಿಸಿದ್ದರು. 'ಕೊಳಲು' ಕವನ ಸಂಕಲನದಲ್ಲಿ ಇದು ಮೊದಲು ಪ್ರಕಟಗೊಂಡಿತ್ತು. ರೈತನನ್ನು ಯೋಗಿಗೆ ಹೋಲಿಸಿರುವುದು ಕವನದ ವಿಶೇಷ. ಇದೀಗ 'ನೇಗಿಲ ಯೋಗಿ' ಗೀತೆ 'ನಾಡ ರೈತ ಗೀತೆ'ಯ ಸ್ಥಾನಮಾನ ಪಡೆದುಕೊಂಡಿದೆ. 1983ರಲ್ಲಿ ತೆರೆಕಂಡ 'ಕಾಮನಬಿಲ್ಲು' ಚಿತ್ರದಲ್ಲಿ ಒಂಚೂರು ಬದಲಾವಣೆಗಳನ್ನು ಮಾಡಿ 'ನೇಗಿಲ ಯೋಗಿ' ಹಾಡನ್ನು ಬಳಸಿಕೊಳ್ಳಲಾಗಿತ್ತು. ಮೇರು ನಟ
ಸ್ವರ ಮಾಂತ್ರಿಕ, ಗಾಯಕ ಸಿ...
2009-12-29 06:33
ಕನ್ನಡ ಸುಗಮ ಸಂಗೀತ ಕ್ಷೇತ್ರದ ಗಾರುಡಿಗ, ಸ್ವರ ಮಾಂತ್ರಿಕ ಸಿ ಅಶ್ವಥ್ ಇನ್ನಿಲ್ಲ. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಅವರು ಕಿಡ್ನಿ ವೈಫಲ್ಯದಿಂದ ಬೆಂಗಳೂರು ಯಶವಂತಪುರದ ಕೊಲಂಬಿಯಾ ಏಷ್ಯಾ ಆಸ್ಪತ್ರೆಯಲ್ಲಿ ಮಂಗಳವಾರ ಬೆಳಗ್ಗೆ 11.30ಕ್ಕೆ ನಿಧನರಾಗಿದ್ದಾರೆ. ಅವರಿಗೆ 70 ವರ್ಷ ವಯಸ್ಸಾಗಿತ್ತು. ಪಿತ್ತಜನಕಾಂಗ ಹಾಗೂ ಮೂತ್ರಜನಕಾಂಗದ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಕೆಲ ದಿನಗಳ ಹಿಂದಷ್ಟೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ರಾಮ್ : ರೆಡೀ... 123...ಸ್ಟಾರ್ಟ್
2009-12-28 09:26
ಇಲ್ಲಿ ಎಂದಿನಂತೇ ಪುನೀತ್ ತನ್ನ ಫ್ಯಾನ್‌ಗಳಿಗೆ ಮೃಷ್ಟಾನ್ನ ನೀಡಿದ್ದಾರೆ. ಒಂದಷ್ಟು ಕಮರ್ಷಿಯಲ್ ಅಂಶಗಳ ಮುಖವಾಡ ಹಾಕಿ ಬರುವ `ಮುತ್ತು' ರಾಮ ಎಂದಿನಂತೇ ಮಾಸ್ ಅವತಾರ ತಾಳುತ್ತಾನೆ.ಇದು ತೆಲುಗಿನ `ರೆಡಿ'ಮೇಡ್ ತಿನಿಸು. ಅಂದರೆ ಮಕ್ಕಿ ಕಾಮಕ್ಕಿ. ಹೀಗಿದ್ದೂ ಪ್ರೇಕ್ಷಕ ಬಿದ್ದು ಬಿದ್ದು ಎಂಜಾಯ್ ಮಾಡುತ್ತಾನೆ. ಕಾಮಿಡಿಯ ಲೇಹ್ಯ ತಿನ್ನುತ್ತಲೇ ಇರಬೇಕು ಎನಿಸುತ್ತದೆ.ಮೊದಲಾರ್ಧ `ಸ್ಲೋ' ಪಾಯಿಸನ್. ಹೋಗ್ತಾ ಹೋಗ್ತಾ ಜನಕ್ಕೆ
ಶಿಶಿರ : `ಮಂಜು' ಸರಿಯಿತು,...
2009-12-28 08:47
ಒಬ್ಬ ಹುಂಬ ಇನ್ನೊಬ್ಬ ಹುಂಬನ ಮುಂದೆ ಚಾಲೆಂಜ್ ಮಾಡುತ್ತಾನೆ: ನಾನು ಅಮವಾಸ್ಯೆ ರಾತ್ರಿ ಒಬ್ಬನೇ ಸ್ಮಶಾನಕ್ಕೆ ಹೋಗಿ, ಅಲ್ಲಿರುವ ಸಮಾಧಿಯೊಂದಕ್ಕೆ ಕಬ್ಬಿಣದ ಮೊಳೆ ಹೊಡೆದು ಬರುತ್ತೀನಿ. ನೂರು ರೂ. ಬೆಟ್ಸ್!ಸರಿ, ಹೋಗ್ತಾನೆ. ಬಿಕೋ ಎಂಬ ಸುಡುಗಾಡಿನಲ್ಲಿ, ಬೆಚ್ಚಿ ಬೀಳಿಸುವ ಚಳಿಯಲ್ಲಿ, ಒಬ್ಬನೇ... ಮುಖದ ತುಂಬಾ ಬೆವರು. ಕಷ್ಟಪಟ್ಟು ಮೊಳೆ ಹೊಡೆಯುತ್ತಾನೆ. ಸುತ್ತಿಗೆಯ ಲಾಸ್ಟ್ ಪಂಚ್‌ಗೆ ಎದೆ ಢವಢವ...
ಮುಗುಳುನಗೆ ಬೀರಿದ ಮಂದಹಾಸ
2009-12-28 07:22
ಅದ್ವಿಕ್ ಮೋಷನ್ ಪಿಕ್ಚರ್‍ಸ್ ಕಂಪನಿ ಲಾಂಛನದಲ್ಲಿ ಎಸ್.ಬಸವರೆಡ್ಡಿ ಅವರು ನಿರ್ಮಿಸುತ್ತಿರುವ 'ಮಂದಹಾಸ' ಚಿತ್ರದ ಪ್ರಥಮ ಹಂತದ ಚಿತ್ರೀಕರಣ ಯಶಸ್ವಿಯಾಗಿ ಮುಕ್ತಾಯವಾಗಿದೆ.ಭದ್ರಾವತಿ ಬಳಿಯ ಸವೈಕಲ್ ಡ್ಯಾಂ, ಚಕ್ರ ಡ್ಯಾಂ ಹಾಗೂ ಸಂತೆಬೆನ್ನೂರಿನಲ್ಲಿ ಎರಡು ಗೀತೆಗಳ ಚಿತ್ರೀಕರಣ ಆಸ್ಕರ್ ಪ್ರಶಸ್ತಿ ವಿಜೇತ, ನೃತ್ಯ ನಿರ್ದೇಶಕ ಲಾಂಜಿ ಫರ್ನಾಂಡಿಸ್ ಅವರ ನೇತೃತ್ವದಲ್ಲಿ ನಡೆದಿದೆ.ಚಿತ್ರತಂಡದವರು ಚಿತ್ರೀಕರಣದಲ್ಲಿ ಉತ್ಸಾಹದಿಂದ ಭಾಗವಹಿಸಿದ್ದರು ಎಂದು ತಿಳಿಸಿದ ನಿರ್ಮಾಪಕರು
ಹೂವಿನ ಕಡೆಗೆ ರವಿ ಹೊರಳುವ ಸಮಯ
2009-12-26 11:01
ಕ್ರೇಜಿಸ್ಟಾರ್ ರವಿಚಂದ್ರನ್ ಅಭಿನಯದ 'ಹೂ' ಚಿತ್ರ 2010ರ ಫೆಬ್ರವರಿಯಲ್ಲಿ ಅರಳಲು ಅಣಿಯಾಗಿದೆ. ಇನ್ನೋವೇಟಿವ್ ಫಿಲ್ಮ್ ಸಿಟಿಯಲ್ಲಿ ಹೂವಿಗೆ ಅಂತಿಮ ಸ್ಪರ್ಶ ಕೊಡುವಲ್ಲಿ ಕ್ರೇಜಿಸ್ಟಾರ್ ತಲ್ಲೀನರಾಗಿದ್ದಾರೆ. ಸ್ನೇಹ ಮತ್ತು ಪ್ರೀತಿಯ ಸಂಕೇತ ಈ ಹೂ ಚಿತ್ರ. ರವಿಚಂದ್ರನ್ ರ ಪ್ರೇಯಸಿಯಾಗಿ ನಮಿತಾ ಹಾಗೂ ಗೆಳತಿಯಾಗಿ ಮೀರಾ ಜಾಸ್ಮಿನ್ ಕಾಣಿಸಲಿದ್ದಾರೆ. ಐದು ಹಾಡುಗಳನ್ನು ಒಳಗೊಂಡಿರುವ ಹೂ
ಕೆಎಂಎಫ್ ನೂತನ ರಾಯಭಾರಿ...
2009-12-25 10:41
ಕೆ ಎಂ ಎಫ್ ಅಧ್ಯಕ್ಷ ಜಿ.ಸೊಮಶೇಖರ್ ಅವರ ಆಸೆ ಕಡೆಗೂ ಕೈಗೂಡಿದೆ. ನಂದಿನಿ ಹಾಲೂ ಹಾಗೂ ಅದರ ಉತ್ಪನ್ನಗಳಿಗೆ ರಾಯಭಾರಿಯಾಗಲು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸರ್ವಾನುಮತದಿಂದ ಒಪ್ಪಿಗೆ ಸೂಚಿಸಿದ್ದಾರೆ. ಈ ಹಿಂದೆ ಕೆಎಂಎಫ್ ಉತ್ಪನ್ನಗಳಿಗೆ ರಿಯಲ್ ಸ್ಟಾರ್ ಉಪೇಂದ್ರ ರಾಯಭಾರಿಯಾಗಿದ್ದರು. ಗುರುವಾರ ಸಂಜೆ ಪುನೀತ್ ರಾಜ್ ಕುಮಾರ್ ಅವರ ನಿವಾಸಕ್ಕೆ ತೆರಳಿದ ಸೋಮಶೇಖರ್
ರಾಕ್ ಲೈನ್ ವರ್ಷದ ಧೀರ...
2009-12-24 11:34
ಯಾವಾಗಲೂ ವರ್ಷದ ಕೊನೆಯಲ್ಲಿ ಸಿನಿಮಾ ನಡೆದ ಹಾದಿ ಮೆಲುಕು ಹಾಕುವ ‘ಇಯರ್ ಎಂಡರ್’ ಬರೆಯುವುದು ರೂಢಿ. ಸಾಮಾನ್ಯವಾಗಿ ಹೀಗೆ ಬರೆಯಲು ಕೂತಾಗ ಅವಗಣನೆಗೆ ಗುರಿಯಾಗುವ ಪ್ರಮುಖನೆಂದರೆ ನಿರ್ಮಾಪಕ. ನಾಯಕ, ನಾಯಕಿ, ನಿರ್ದೇಶಕ, ಸಿನಿಮಾ ಈ ಅಂಶಗಳ ಯಶಸ್ಸು, ಸಂಖ್ಯೆಯನ್ನು ಆಧಾರವಾಗಿಟ್ಟುಕೊಂಡೇ ಪೋಸ್ಟ್‌ಮಾರ್ಟಂ ಮಾಡಿಬಿಡುವುದು ಮಾಮೂಲು. ಅಸಲಿಗೆ ಇಂದು ಸಂಕಷ್ಟದಲ್ಲಿರುವಾತ ನಿರ್ಮಾಪಕ. ಹೂಡಿದ ಹಣಕ್ಕೆ ಲೆಕ್ಕ, ಬುಕ್ಕಿಲ್ಲದೆ ಆದಾಗ
ಜೀ ಕನ್ನಡದಲ್ಲಿ ಎದ್ದೇಳು...
2009-12-24 10:43
ನವರಸ ನಾಯಕ ಜಗ್ಗೇಶ್ ಅಭಿನಯದ 2009ನೇ ಸಾಲಿನ ಹಿಟ್ ಚಿತ್ರ 'ಎದ್ದೇಳು ಮಂಜುನಾಥ' ಕ್ರಿಸ್ ಮಸ್ ಹಬ್ಬದ ಸಂದರ್ಭದಲ್ಲಿ ದಿನಾಂಕ 26.12.09 ರ ಶನಿವಾರ ಸಂಜೆ 6 ಗಂಟೆಗೆ ಕನ್ನಡಿಗರ ಕಣ್ಮಣಿ ಜೀ ಕನ್ನಡದಲ್ಲಿ ಪ್ರಸಾರವಾಗಲಿದೆ. ವಿಶೇಷತೆಗಳ ಹೂರಣ ಎಂದೆನಿಸಿರುವ ಎದ್ದೇಳು ಮಂಜುನಾಥ ಚಿತ್ರ ಯಶಸ್ವಿ ನಿರ್ದೇಶಕ ಗುರುಪ್ರಸಾದ್ ಅವರ ಸಾರಥ್ಯದಲ್ಲಿ ಮೂಡಿಬಂದಿದ್ದು, ಕಳೆದ ಜುಲೈ
ಬೆಳಗಾವಿಯಲ್ಲಿ ಪ್ರತಿಷ್ಠಿತ...
2009-12-24 09:46
ಜಿಲ್ಲಾ ಆಡಳಿತ, ಚಿಲ್ಡ್ರನ್ ಫೀಲ್ಮ್ ಸೊಸೈಯಿಟಿ ಹಾಗೂ ಅಜಂತಾ ಫೀಲ್ಮ್ ಸೊಸೈಟಿ ಇವರ ಸಂಯುಕ್ತ ಆಶ್ರಯದಲ್ಲಿ ಬರುವ ಜನವರಿ 11 ರಿಂದ 13 ರವರೆಗೆ ಮೂರು ದಿನಗಳ 6ನೇ ಅಂತರರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವವನ್ನು ಬೆಳಗಾವಿಯಲ್ಲಿ ಏರ್ಪಡಿಸಲು ನಿರ್ಧರಿಸಲಾಗಿದೆ. ಅಪರ ಜಿಲ್ಲಾಧಿಕಾರಿ ಡಾ.ವಿಜಯಕುಮಾರ ತೋರಗಲ್ ಅವರ ಅಧ್ಯಕ್ಷತೆಯಲ್ಲಿ ಈ ಚಲನಚಿತ್ರೋತ್ಸವ ಏರ್ಪಡಿಸುವ ಕುರಿತಂತೆ ನಡೆದ ಸಭೆಯಲ್ಲಿ
ಪ್ರಿಯಕರನ ಜತೆ ನಟಿ ಶಕೀಲಾ...
2009-12-24 09:03
'ಸಾಫ್ಟ್ ಸೆಕ್ಸ್' ಚಿತ್ರಗಳ ರಾಣಿ ಎಂದೇ ಖ್ಯಾತಿವೆತ್ತ ನಟಿ ಶಕೀಲಾಗೆ ಕಡೆಗೂ ಕಂಕಣಬಲ ಕೂಡಿಬಂದಿದೆ. ಚೆನ್ನೈ ಮೂಲಕ ಉದ್ಯಮಿ ಹಾಗೂ ಚಿರಕಾಲದ ಪ್ರೇಮಿಯನ್ನು ವರಿಸುವುದಾಗಿ ಮುವ್ವತ್ತಾರರ ಹರೆಯದ ಶಕೀಲಾ ತಿಳಿಸಿದ್ದಾರೆ. ನಾಚಿಯಾಪುರಂ ಚಿತ್ರೀಕರಣ ಸ್ಥಳದಲ್ಲಿ ಬುಧವಾರ(ಡಿ.16) ಶಕೀಲಾ ತಮ್ಮ ಮದುವೆ ವಿಚಾರವನ್ನು ಸುದ್ದಿಗಾರರಿಗೆ ಅಧಿಕೃತವಾಗಿ ತಿಳಿಸಿದರು. ''ದಕ್ಷಿಣ ಭಾರತದ ಎಲ್ಲಾ ಭಾಷೆಯ ಚಿತ್ರಗಳಲ್ಲಿ ನಟಿಸಿದ್ದೇನೆ.ನಾನು ನಟಿಸಿರುವ
ಶೇಕಡಾವಾರು ಪದ್ಧತಿಯಲ್ಲಿ...
2009-12-24 07:07
ರಾಜ್ಯದಲ್ಲಿ ಜನವರಿ 1, 2010ರಿಂದ ಬಿಡುಗಡೆಯಾಗಲಿರುವ ಎಲ್ಲಾ ಭಾಷೆಯ ಚಿತ್ರಗಳಿಗೂ ಶೇಕಡಾವಾರು ಪದ್ಧತಿ ಅನ್ವಯವಾಗಲಿದೆ. ಕನ್ನಡ ಚಿತ್ರೋದ್ಯಮದ ಹಿರಿಯ ವಿತರಕ ಹಾಗೂ ವಾಣಿಜ್ಯೋದ್ಯಮಿ ತಲ್ಲಂ ನಂಜುಂಡಶೆಟ್ಟ ಈ ಹೊಸ ಪದ್ಧತಿಗೆ ಮುದ್ರೆ ಒತ್ತುವ ಮೂಲಕ ನಾಂದಿ ಹಾಡುತ್ತಿದ್ದಾರೆ. ಈ ಮೂಲಕ ಶೇಕಡಾವಾರು ಪದ್ಧತಿಗೆ ನಾಂದಿ ಹಾಡಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ತಲ್ಲಂ ನಂಜುಂಡ ಶೆಟ್ಟಿ ಪಾತ್ರರಾಗಲಿದ್ದಾರೆ.ಎ
'ಜಸ್ಟ್ ಮಾತ್ ಮಾತಲ್ಲಿ'...
2009-12-23 11:19
'ಸೈಕೋ' ಚಿತ್ರದ ಮೂಲಕ ರಾಜ್ಯದ ಮನೆ ಮಾತಾಗಿರುವ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಸಂಗೀತ ನೀಡಿರುವ ಎರಡನೇ ಚಿತ್ರ ಜಸ್ಟ್ ಮಾತ್ ಮಾತಲ್ಲಿ. 'ನಿನ್ನ ಪೂಜೆಗೆ ಬಂದೇ ಮಾದೇಶ್ವರ' ಎನ್ನುವ ಪಾಪ್ ಶೈಲಿಯ ಸಂಗೀತ ನೀಡಿ ಜನಪ್ರಿಯತೆ ಗಳಿಸಿದ್ದ ರಘು ದೀಕ್ಷಿತ್ ಈ ಚಿತ್ರದಲ್ಲೂ ವಿಭಿನ್ನ ರೀತಿಯ ಸಂಗೀತ ನೀಡಿದ್ದಾರೆ ಎನ್ನಬಹುದು.ಎರಡು ಹಾಡಿಗೆ ಅವರೇ ಸಾಹಿತ್ಯ ಕೂಡ
ವಿಜಿಯ ರಾಧೆಯಾಗಿ ತೆಲುಗಿನ...
2009-12-23 09:57
ಜಿ.ಎಲ್.ಕೆ ಫಿಲಂಸ್ ಲಾಂಛನದಲ್ಲಿ ಜಿ.ರವಿಕಮಲ್ ಮತ್ತು ಜಿ.ಶ್ರೀಧರ್ ನಿರ್ಮಿಸುತ್ತಿರುವ ಚಿತ್ರ 'ರಾಧ' ಚಿತ್ರದ ನಾಯಕಿಯಾಗಿ ಮಧುವಿಕಾ ಆಯ್ಕೆಯಾಗಿದ್ದಾರೆ. ನೆರೆಯ ಆಂಧ್ರದವರಾದ ಇವರು ತೆಲುಗಿನ ಒಂದು ಚಿತ್ರದಲ್ಲಿ ನಟಿಸಿದ್ದಾರೆ. ರಾಯಲ್‌ಸೀಮಾ ಪ್ರಾಂತ್ಯದ ಕಡಪದ ಬಳಿಯ ಗುರುಕುಂಡದಲ್ಲಿ ಈಗ ಚಿತ್ರದ ಚಿತ್ರೀಕರಣ ಭರದಿಂದ ಸಾಗಿದೆ. ನಾಯಕಿಯನ್ನು ಹುಡುಕಿಕೊಂಡು ಡಾಬಾದ ಬಳಿ ಬಂದ ನಾಯಕನಿಗೆ ಖಳನಟರು ಎದುರಾಗುತ್ತಾರೆ. ಆಗ ಇಬ್ಬರ ನಡುವೆ
ಜೋಗಯ್ಯನಿಗೆ ಕಡೆಗೂ ಮುಹೂರ್ತ...
2009-12-23 09:07
ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ನೂರನೇ ಚಿತ್ರ 'ಜೋಗಯ್ಯ'ನಿಗೆ ಕಡೆಗೂ ಮುಹೂರ್ತ ನಿಗದಿಯಾಗಿದೆ. 2010ರ ಏಪ್ರಿಲ್ 24ರಂದು 'ಜೋಗಯ್ಯ' ಚಿತ್ರ ಸೆಟ್ಟೇರಲಿದೆ. ಏಪ್ರಿಲ್ 24 ವರನಟ ಡಾ.ರಾಜ್ ಅವರ ಹುಟ್ಟುಹಬ್ಬ. ಹಾಗಾಗಿ 'ಜೋಗಯ್ಯ'ನನ್ನು ಅಂದೇ ಆರಂಭಿಸಲು ನಿರ್ದೇಶಕ ಪ್ರೇಮ್ ಸಿದ್ಧತೆ ನಿರ್ಧರಿಸಿದ್ದಾರೆ. ಈ ಚಿತ್ರಕ್ಕೆ ನಿರ್ದೇಶಕ ಪ್ರೇಮ್ ಪತ್ನಿ ರಕ್ಷಿತಾ ನಿರ್ಮಾಪಕಿ. ಶಿವಣ್ಣನ ವೃತ್ತಿ ಜೀವನದಲ್ಲಿ
ಮೇಲ್ಮನೆಯಲ್ಲಿ ಮೊಳಗಲಿ...
2009-12-23 07:35
ಈ ಬಾರಿಯ ವಿಧಾನ ಪರಿಷತ್ ಚುನಾವಣೆಯಲ್ಲಿ ಕನ್ನಡದ ಚಿತ್ರೋದ್ಯಮದ ಇಬ್ಬರು ನಿರ್ಮಾಪಕರು ಗೆದ್ದು ಮೇಲ್ಮನೆಗೆ ಆಯ್ಕೆಯಾಗಿದ್ದಾರೆ. ಹಳೆಯ ಕುದುರೆ ಎಂದೇ ಹೆಸರಾದ ಸಂದೇಶ್ ನಾಗರಾಜ್ ಹಾಗೂ 'ಮುಂಗಾರು ಮಳೆ'ಖ್ಯಾತಿಯ ಇ ಕೃಷ್ಣಪ್ಪ ಇದೇ ಮೊದಲ ಬಾರಿಗೆ ಜೆಡಿ(ಎಸ್)ಪಕ್ಷದಿಂದ ಮೇಲ್ಮನೆ ಪದಗ್ರಹಣ ಮಾಡಿದ್ದಾರೆ. ಬಹಳ ವರ್ಷಗಳಿಂದ ಮೈಸೂರಿನಿಂದ ಸಂದೇಶ್ ನಾಗರಾಜ್ ಹಾಗೂ ನೆಲಮಂಗಲದ ಇ ಕೃಷ್ಣಪ್ಪ ವಿಧಾನ ಪರಿಷತ್
ಪ್ರಕಾಶ್ ರೈಗೆ ಪ್ರತಿಷ್ಠಿತ...
2009-12-23 06:36
ದಕ್ಷಿಣ ಭಾರತದ ಜನಪ್ರಿಯ ನಟ ಪ್ರಕಾಶ್ ರೈ ಅವರಿಗೆ ಪ್ರತಿಷ್ಠಿತ ವಿ ಶಾಂತಾರಾಂ ಪ್ರಶಸ್ತಿ ಲಭಿಸಿದೆ. ತಮಿಳಿನ 'ಕಾಂಚೀವರಂ' ಚಿತ್ರದಲ್ಲಿನ ಅಭಿನಯಕ್ಕಾಗಿ ಅವರಿಗೆ ಅತ್ಯುತ್ತಮ ನಟ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಅತ್ಯುತ್ತಮ ನಟ ವಿಭಾಗದಲ್ಲಿ ಬಾಲಿವುಡ್ ನ ಶಾರುಖ್ ಖಾನ್, ಸೈಫ್ ಆಲಿ ಖಾನ್, ಉಪೇಂದ್ರ ಲಿಮಯೆ ಹಾಗೂ ಮಲಯಾಳಂನ ಮೋಹನ್
ಅನು ಪ್ರಭಾಕರ್ ಬರಲಿದ್ದಾರೆ...
2009-12-22 11:46
ಜೀ ಕನ್ನಡ ಗೃಹಿಣಿಯರನ್ನು ಗಮನದಲ್ಲಿರಿಸಿಕೊಂಡು ಹೋಂ ಮಿನಿಸ್ಟರ್ ಎಂಬ ಹೊಸ ರಿಯಾಲಿಟಿ ಶೋವನ್ನು ಪ್ರಾರಂಭಿಸಿದೆ. ಈ ಶೋವನ್ನು ಖ್ಯಾತ ನಟಿ ಅನು ಪ್ರಭಾಕರ್ ನಡೆಸಿಕೊಡಲಿದ್ದು ಈ ಶೋ ಮೂಲಕ ಅನುಪ್ರಭಾಕರ್ ಅವರನ್ನು ಕರ್ನಾಟಕದ ಆಯ್ದ ಮನೆಗಳಿಗೆ ಆಹ್ವಾನಿಸಿಕೊಳ್ಳುವ ಅಪರೂಪದ ಅವಕಾಶವೊಂದನ್ನು ಜೀ ಕನ್ನಡ ನೀಡುತ್ತಿದೆ.ದೂರವಾಣಿ ಸಂಖ್ಯೆ ಆಧರಿಸಿ ಆಯ್ಕೆಯಾಗುವ ಸ್ಪರ್ಧಿಗಳೆ ಈ ಶೋನ ಕೇಂದ್ರ ಬಿಂದು. ನಿಗದಿತ
ಕಸ್ತೂರಿಯಲ್ಲಿ 'ಧಮ್'...
2009-12-22 11:28
ಕಸ್ತೂರಿ ವಾಹಿನಿಯಲ್ಲಿ ಡಾನ್ಸ್ ರಿಯಾಲಿಟಿ ಶೋ 'ಧಮ್' ಈಗಾಗಲೇ ಪ್ರಸಾರವನ್ನು (ಡಿ.21) ಆರಂಭಿಸಿದೆ. ನಾವು ಯಾರಿಗೂ ಕಮ್ಮಿ ಇಲ್ಲ ಎಂಬುದು ಧಮ್ ನ ಅಡಿಬರಹ. ಪ್ರತಿಭಾವಂತ ಮಕ್ಕಳನ್ನು ಗಮನದಲ್ಲಿಟ್ಟುಕೊಂಡು ಹಾಗು ನಿಜವಾದ ಪ್ರತಿಭೆಗಳನ್ನು ಹೊರಜಗತ್ತಿಗೆ ಪರಿಚಯಿಸುವ ಮಹತ್ವಾಕಾಂಕ್ಷೆಯಿಂದ ಈ ಕಾರ್ಯಕ್ರಮವನ್ನು ಪ್ರಾರಂಭಿಸಿದ್ದೇವೆ ಎಂದು ಕಸ್ತೂರಿ ವಾಹಿನಿ ತಿಳಿಸಿದೆ.ಸೋಮವಾರದಿಂದ ಶುಕ್ರವಾರದವರೆಗೆ ಪ್ರತಿ ರಾತ್ರಿ 8ಗಂಟೆಗೆ 'ಧಮ್' ಪ್ರಸಾರವಾಗುತ್ತಿದೆ.
ಗಂಡಂದಿರ ಮೇಲೆ ಹೆಂಡ್ತೀರ...
2009-12-22 10:08
ಜಿ. ರಾಮಚಂದ್ರನ್ ಮೂಲತಃ ನಾಟಕ ಕಾಲಾವಿದರು, ಜೀವನೋಪಾಯಕ್ಕಾಗಿ ಕೊಳ್ಳೆಗಾಲದಿಂದ ಚೆನ್ನೈಗೆ ಹೋಗಿ ಅಲ್ಲಿ 5 ತಮಿಳು ಚಿತ್ರಗಳನ್ನು ನಿರ್ಮಿಸಿದ್ದಾರೆ. ಈಗ ಕನ್ನಡದಲ್ಲಿ ಒಂದು ಚಿತ್ರವನ್ನು ನಿರ್ಮಿಸಬೇಕೆಂಬ ಉದ್ದೇಶದಿಂದ 'ಹೆಂಡ್ತೀರ ದರ್ಬಾರ್' ಎಂಬ ಚಿತ್ರ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಇದು ತಮಿಳಿನ "ವರವು ಎತ್ತಣ ಸಲವು ಪತ್ತಣ" ಎಂಬ ಚಿತ್ರದ ಕನ್ನಡ ಅವತರಣಿಕೆ. ಈಗಾಗಲೇ ಗಂಡನಮೇಲೆ ಹೆಂಡತಿಯರ ದಬ್ಬಾಳಿಕೆ
ನಿಮ್ಮ ನೆಚ್ಚಿನ ಟಿವಿ ಚಾನಲ್...
2009-12-22 09:48
ಕನ್ನಡ ಟಿವಿ ಒದಗಿಸುವ ಸುದ್ದಿ ಮತ್ತು ಮನರಂಜನೆ ಸಾಮಗ್ರಿಗಳಿಗೆ ರಾಜ್ಯ ಮತ್ತು ವಿದೇಶಿ ವೀಕ್ಷಕ ಸಮುದಾಯದ ಒಟ್ಟಾರೆ ಬೇಡಿಕೆ ಚೆನ್ನಾಗಿಯೇ ಇದೆ. ಕರ್ನಾಟಕದ ಆಗುಹೋಗುಗಳನ್ನು ಕಣ್ಣಾರೆ ಕಾಣಲು ಕನ್ನಡ ಟಿವಿ ಕಾರ್ಯಕ್ರಮಗಳನ್ನು ತಪ್ಪದೆ ವೀಕ್ಷಿಸುವ ಒಂದು ವರ್ಗ ಹಾಗೇಯಿದೆ. ಕೆಲವೊಮ್ಮೆ ಸಿಎನ್ಎನ್, ಎನ್ ಡಿಟಿವಿ ಅಥವಾ ತಮ್ಮ ದೇಶದಲ್ಲಿ ಜನಪ್ರಿಯವಾಗಿರುವ, ಸ್ಥಳೀಯ ವಾರ್ತೆಗಳನ್ನು ಕೊಡುವ ಇಂಗ್ಲಿಷ್ ಚಾನಲ್ಲುಗಳನ್ನು
ವರ್ಷದ ಕೊನೆಯ ಚಿತ್ರವಾಗಿ...
2009-12-22 09:20
ಕನ್ನಡ ಚಿತ್ರರಂಗಕ್ಕೊಂದು ವಿಭಿನ್ನ ಚಿತ್ರ ಕೊಡಬೇಕೆಂಬ ಉದ್ದೇಶದಿಂದ ಉತ್ಸಾಹಿ ಯುವಕ ಮಂಜು ಸ್ವರಾಜ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಚಿತ್ರ 'ಶಿಶಿರ'. ಈ ವಾರ ರಾಜ್ಯಾದ್ಯಂತ ತೆರೆಕಾಣಲಿದೆ. ಪೂರ್ಣಚಂದ್ರ ಅಥವಾ 6ನೇ ಋತು ಎಂದು ಅರ್ಥ ಕೊಡುವ ಈ ಶೀರ್ಷಿಕೆಯೇ ಆಕರ್ಷಕವಾಗಿದೆ. ಇದಕ್ಕೆ ಹಾರರ್ ಟಚ್ ಕೂಡ ಇದೆ. ಮಹಾಶೈಲ ಸಿನಿಸಂಕುಲ ಮತ್ತು ಸಿ.ಎಂ.ಬಿ. ವೆಂಚರ್ಸ್ ಅಡಿಯಲ್ಲಿ ನಿರ್ಮಾಣವಾಗಿರುವ
ಕಿಂಗ್ ಫಿಶರ್ ಕ್ಯಾಲೆಂಡರ್...
2009-12-22 07:26
ಕಣ್ಮನ ತಣಿಸುವ 2010ನೇ ಸಾಲಿನ ಕಿಂಗ್ ಫಿಶರ್ ಕ್ಯಾಲೆಂಡರ್ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಈ ಮೋಹಕ ಕ್ಯಾಲೆಂಡರನ್ನು ಬಾಲಿವುಡ್ ಬೆಡಗಿ ದೀಪಿಕಾ ಪಡುಕೋಣೆ ಭಾನುವಾರ(ಡಿ.20) ಲೋಕಾರ್ಪಣೆ ಮಾಡಿದರು. ಮೋಹಕ ರೂಪದರ್ಶಿಯರು, ಹೊರಾಂಗಣ ದೃಶ್ಯಗಳು, ಮೈನವಿರೇಳಿಸುವ ಛಾಯಾಚಿತ್ರಗಳಿಗೆ ಹಾಗೂ ಈಜುಡುಗೆ ಸುಂದರಿಯರಿಗೆ ಗೋಡೆ ಕ್ಯಾಲೆಂಡರ್ ಗಳಲ್ಲೇ ಹೆಸರುವಾಸಿ ಕಿಂಗ್ ಫಿಶರ್ ಕ್ಯಾಲೆಂಡರ್!ಕಳೆದ ಏಳು ವರ್ಷಗಳಿಂದ ರೂಪದರ್ಶಿಯರ ಚೆಲುವನ್ನು ಅನಾವರಣಗೊಳಿಸುತ್ತಾ
ಪಾತ್ರಕ್ಕಾಗಿ ಊಟ ಬಿಟ್ಟು...
2009-12-22 06:10
ಅರಮನೆ ಚಿತ್ರದ ನಂತರ ನಾಗಶೇಖರ್ ಏನು ಮಾಡುತ್ತಿದ್ದಾರೆಂದು ಸಹಜವಾಗಿಯೇ ಏಳುವ ಕುತೂಹಲಕ್ಕೆ ಅಂತ್ಯ ಹಾಡಿ ಸಂಜು, ಗೀತಾ ಮದುವೆಯ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದಾರೆ. 'ಸಂಜು ವೆಡ್ಸ್ ಗೀತಾ' ಚಿತ್ರದ ಗೀತಾ ಪಾತ್ರವನ್ನು ನಟಿ ರಮ್ಯ ನಿರ್ವಹಿಸುತ್ತಿದ್ದಾರೆ. ಸಂಜು ಪಾತ್ರದಲ್ಲಿ ಶ್ರೀನಗರ ಕಿಟ್ಟಿ ಅಭಿನಯಿಸುತ್ತಿದ್ದಾರೆ. ಈಗಾಗಲೇ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. 20 ದಿನ ಊಟಿಯ ರಮ್ಯ ಹೊರಾಂಗಣದಲ್ಲಿ ಹಾಡು
ಲಿಫ್ಟ್ ಕೊಡ್ಲಾ ಎನ್ನಲು ಬಂದ...
2009-12-21 12:29
ಸಿ ಎಂ ಆರ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಾಣವಾಗುತ್ತಿರುವ `ಲಿಫ್ಟ್ ಕೊಡ್ಲಾ' ಚಿತ್ರದ ನಾಯಕಿಯಾಗಿ ಅರ್ಚನಾಗುಪ್ತಾ ಆಯ್ಕೆಯಾಗಿದ್ದಾರೆ ಎಂದು ನಿರ್ಮಾಪಕ ಸಿ ಎಂ ಆರ್ ಶಂಕರ್‌ರೆಡ್ಡಿ ತಿಳಿಸಿದ್ದಾರೆ. ಅರ್ಚನಾಗುಪ್ತಾ ಹಿಂದೆ ಗಣೇಶ್ ಅಭಿನಯದ `ಸರ್ಕಸ್' ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದ್ದರು.ಶ್ರೀಮತಿ ಸಬೀತ ಕೆ.ಸಿ.ರಾಮಮೂರ್ತಿ ಅರ್ಪಿಸಿ, ಅಶೋಕ್ ಕಶ್ಯಪ್ ನಿರ್ದೇಶಿಸುತ್ತಿರುವ ಈ ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಎರಡನೇ ಹಂತದ
ಪುನೀತ್, ಪ್ರಿಯಾಮಣಿಯ...
2009-12-21 11:15
ಆದಿತ್ಯ ಆರ್ಟ್ಸ್ ಎಮ್.ಸಿ.ಎಲ್ ಲಾಂಛನದಲ್ಲಿ ಆದಿತ್ಯಬಾಬು ನಿರ್ಮಿಸಿರುವ `ರಾಮ್' ಚಿತ್ರ ಈ ವಾರ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಕಳೆದ ವಾರ ಗಣೇಶ್ ಅವರ ಮಳೆಯಲಿ ಜೊತೆಯಲಿ ಚಿತ್ರದ ಜೊತೆ ಬಿಡುಗಡೆಯಾಗುಲು ಸಿದ್ಧವಾಗಿದ್ದ ರಾಮ್ ಚಿತ್ರವನ್ನು ದಿಢೀರ್ ಎಂದು ಮುಂದೂಡಲಾಗಿತ್ತು. ಆದರೆ, ಇದು 'ಮಳೆಯಲಿ..'ಚಿತ್ರದ ಕಾರಣಕ್ಕೆ ಅಲ್ಲ ಎಂಬುದು ರಾಮ್ ತಂಡದ ವಾದ. ಅದೇನೇ ಇರಲಿ, ಪುನೀತ್
2012 ಏನಾಗುತ್ತದೋ ಆಗಲಿ: ಗಣೇಶ್
2009-12-21 09:23
ಶಿವಮೊಗ್ಗ,ಡಿ. 21: ಯುವಸಾಹಿತಿ, ಪತ್ರಕರ್ತ ಶಿ.ಜು.ಪಾಶ ಬರೆದಿರುವ ’2012 ಮಹಾವಿನಾಶ’ ಪುಸ್ತಕ ಬಿಡುಗಡೆಯನ್ನು ಚಲನಚಿತ್ರ ನಾಯಕ ನಟ ಗೋಲ್ಡನ್ ಸ್ಟಾರ್ ಗಣೇಶ್ ಸೋಮವಾರ ಇಲ್ಲಿ ಬಿಡುಗಡೆಗೊಳಿಸಿದರು.ಕೃತಿ ಬಿಡುಗಡೆ ಮಾಡಿ ಮಾತನಾಡಿದ ಗಣೇಶ್, ಸ್ವಂತ ನಿರ್ಮಾಣದ 'ಮಳೆಯಲಿ ಜೊತೆಯಲಿ' ಚಿತ್ರ ರಾಜ್ಯದಾದ್ಯಂತ ಉತ್ತಮ ಪ್ರದರ್ಶನದತ್ತ ಸಾಗುತ್ತಿದ್ದು, ಲಕ್ಷ್ಮೀ ಚೆನ್ನಾಗಿ ಓಡುತ್ತಿದ್ದಾಳೆ. ಅದೇ ರೀತಿ ಶಿ.ಜು.ಪಾಶರವರ ಸರಸ್ವತಿಯು ಚೆನ್ನಾಗಿ ಓಡುವಂತಾಗಲಿ
ಅಭಿನಯ ಶಾರದೆ ಜಯಂತಿ ಸಕತ್...
2009-12-21 08:35
75 ವರ್ಷ ಇತಿಹಾಸವಿರುವ ಕನ್ನಡ ಚಿತ್ರರಂಗದಲ್ಲಿ ಸಕತ್ ಹಾಟ್ ಹಾಗೂ ಗ್ಲಾಮರಸ್ ನಟಿ ಯಾರು ಎಂಬ ಸಮೀಕ್ಷೆಗೆ ಉತ್ತರ ಸಿಕ್ಕಿದೆ. ರೇಡಿಯೋ ಮಿರ್ಚಿ 98.3 ನಡೆಸಿದ ಸಮೀಕ್ಷೆಯಲ್ಲಿ ಶೇ. 99 ರಷ್ಟು ಶೋತೃಗಳು ಅಭಿನಯ ಶಾರದೆ ಜಯಂತಿ ಅವರನ್ನು "ಸ್ಯಾಂಡಲ್ ವುಡ್ ನ ಹಾಟೆಸ್ಟ್ ನಟಿ" ಎಂದು ಆಯ್ಕೆ ಮಾಡಿದ್ದಾರೆ.ಫಲಿತಾಂಶ ಬಗ್ಗೆ ತಿಳಿದ
ಗುರುವಿನ ಡೈರೆಕ್ಟರ್...
2009-12-20 09:58
ಮಠ, ಎದ್ದೇಳು ಮಂಜುನಾಥ ಚಿತ್ರ ಖ್ಯಾತಿಯ ಗುರುಪ್ರಸಾದ್ ನಿರ್ದೇಶನದ ಹೊಸ ಚಿತ್ರ 'ಡೈರೆಕ್ಟರ್ ಸ್ಪೆಷಲ್' ನಿಂದ ನಾಯಕ ನಟ ಕೋಮಲ್ ಹೊರನಡೆದಿದ್ದಾರೆ. ಚಿತ್ರದ ಕಥೆಯನ್ನು ಪೂರ್ಣವಾಗಿ ಕೇಳಿ, ಅದರ ಗಾತ್ರ, ವಿಸ್ತೀರ್ಣ, ಆಳವನ್ನು ಅರ್ಥೈಸಿಕೊಂಡ ಮೇಲೆ ಇದು ನನ್ನಿಂದ ಸಾಧ್ಯವಿಲ್ಲ. ಈ ಪಾತ್ರಕ್ಕೆ ನಾನು ನ್ಯಾಯ ಸಲ್ಲಿಸಲಾರೆ ಎಂದು ಅನ್ನಿಸಿತು ಹಾಗಾಗಿ ನಾನು ಈ ಚಿತ್ರದಿಂದ
ರೆಬೆಲ್ ಸ್ಟಾರ್ ಅಂಬಿ...
2009-12-20 08:59
ಕಲಾವಿದರ ಸಂಘದ ಅಧ್ಯಕ್ಷ ಸ್ಥಾನಕ್ಕೆ ನೀಡಿದ್ದ ರಾಜೀನಾಮೆಯನ್ನು ಅಂಬರೀಷ್ ಹಿಂಪಡೆದಿದ್ದಾರೆ. ದರ್ಶನ್, ಸುದೀಪ್, ಉಪೇಂದ್ರ, ರಾಘವೇಂದ್ರ ರಾಜ್‌ಕುಮಾರ್, ಸರೋಜಾದೇವಿ ಮೊದಲಾದವರು ಅಂಬಿ ನಿವಾಸಕ್ಕೆ ಶನಿವಾರ ತೆರಳಿ ಅವರೊಡನೆ ಸಮಾಲೋಚಿಸಿದರು.ಮೊದಲಿಗೆ ಸಮ್ಮತಿಸದ ಅಂಬಿ, ಎಲ್ಲರ ಆಗ್ರಹಪೂರ್ವಕ ಒತ್ತಾಯಕ್ಕೆ ಮಣಿದರು. ಈ ಸಂದರ್ಭದಲ್ಲಿ ತಾರಾ, ಸುಧಾರಾಣಿ, ಪೂಜಾ ಗಾಂಧಿ, ಐಂದ್ರಿತಾ ರೇ ಮತ್ತಿತರರು ಇದ್ದರು. ಕೊನೆಗೂ ಬಿಸಿ ಮುಟ್ಟಿತು!: ಮೊನ್ನೆ
ಕಳ್ಳರ ಸಂತೆ:ಲಂಚ...
2009-12-20 06:37
ಒಬ್ಬ ದುಡ್ಡಿಗೆ ನಂದಿ ಬೆಟ್ಟವನ್ನೇ ಮೂರು ತಿಂಗಳು ಬಿಟ್ಟುಕೊಡ್ತಾನೆ. ಇನ್ನೊಬ್ಬ `ಲಂಚಾವತಾರ' ತಾಳಿ, ವಿಧಾನ ಸೌಧವನ್ನೇ ಕೊಡ್ತೀನಿ ಅಂತಾನೆ. ಮತ್ತೊಬ್ಬ ಎರಡು ಲಕ್ಷ ಕೊಟ್ರೆ ಮಾತ್ರ ಲೆಕ್ಚರರ್ ಪೋಸ್ಟ್ ಅಂತಾನೆ...ಅಲ್ಲಿಗೆ ಉದಯವಾಯಿತು ನಮ್ಮ... ಇಲ್ಲಿ ಎಲ್ಲಾ ಇದೆ. ಪೊಲೀಸರ ದಬ್ಬಾಳಿಕೆ, ರಾಜಕಾರಣಿಗಳ ದೊಂಬರಾಟ, ಭ್ರಷ್ಟ ಅಧಿಕಾರಿಗಳ ಬದುಕು, ಕಷ್ಟ ಪಡುವವರ ಬಯಲಾಟ...ಹೀಗೆ ಇಡೀ ಕತೆ ನಮ್ಮನ್ನು
ಶೆಣೈ 'ಪ್ರಾರ್ಥನೆ'ಗೆ ನಟಿ...
2009-12-19 10:58
ಪತ್ರಕರ್ತ ಸದಾಶಿವ ಶೆಣೈ ಇದೇ ಮೊದಲ ಬಾರಿಗೆ ನಿರ್ದೇಶಿಸುತ್ತಿರುವ 'ಪ್ರಾರ್ಥನೆ' ಚಿತ್ರದಲ್ಲಿ ತಾವು ನಟಿಸುತ್ತಿರುವ ಸುದ್ದಿಯನ್ನು ನಟಿ ಸುಧಾರಾಣಿ ತಳ್ಳಿಹಾಕಿದ್ದಾರೆ. ಈ ಚಿತ್ರದ ಮುಖ್ಯಭೂಮಿಕೆಯಲ್ಲಿ ಅನಂತನಾಗ್ ಜತೆ ಸುಧಾರಾಣಿ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಈ ಹಿಂದೆ ಪ್ರಕಟವಾಗಿತ್ತು. ಆದರೆ ಈ ಚಿತ್ರದಲ್ಲಿ ತಾವು ನಟಿಸುತ್ತಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಪ್ರಾರ್ಥನೆ ಚಿತ್ರದ ಹಾಡಿನ ಚಿತ್ರೀಕರಣ ಈಗಾಗಲೇ
ನಿರ್ಮಾಪಕಿ ಶಿಲ್ಪಾ ಗಣೇಶ್...
2009-12-19 09:39
'ಮಳೆಯಲಿ ಜೊತೆಯಲಿ' ಹಾಗೂ 'ಮಳೆಬಿಲ್ಲೇ' ಚಿತ್ರದ ನಿರ್ಮಾಪಕರು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಕಾರಣ, ಆ ಚಿತ್ರಗಳ ಸಿನಿಮಾ ಭಿತ್ತಿ ಚಿತ್ರಗಳನ್ನು ಗೋಡೆಗೆ ಅಂಟಿಸಿ ಬೆಂಗಳೂರು ನಗರದ ಅಂದಚೆಂದವನ್ನು ಕೆಡಿಸಿದ್ದಾರೆ ಎಂಬ ಆರೋಪ.ಈ ಸಂಬಂಧ 'ಮಳೆಯಲಿ ಜೊತೆಯಲಿ' ಹಾಗೂ 'ಮಳೆಬಿಲ್ಲೇ' ಚಿತ್ರದ ನಿರ್ಮಾಪಕರ ವಿರುದ್ಧ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಚಿತ್ರನಟಿ ಅಮೂಲ್ಯಾರಿಗೆ...
2009-12-19 07:32
ಚಿತ್ರನಟಿ ಅಮೂಲ್ಯಾ ಅವರಿಗೆ ಪದೇ ಪದೆ ಅಪರಿಚಿತ ವ್ಯಕ್ತಿಯಿಂದ ಕೊಲೆ ಬೆದರಿಕೆ ಬರುತ್ತಿರುವ ಹಿನ್ನೆಲೆಯಲ್ಲಿ ಆಕೆಗೆ ಪೊಲೀಸ್ ಭದ್ರತೆ ಒದಗಿಸಲು ಚಿಂತಿಸಲಾಗಿದೆ. ಆಟೋಗ್ರಾಫ್ ಪಡೆಯುವ ನೆಪದಲ್ಲಿ ಆಯುಧದಿಂದ ಚುಚ್ಚಿ ಕೊಲೆ ಮಾಡುತ್ತೇನೆ ಎಂದು ಅಪರಿಚಿತ ವ್ಯಕ್ತಿ ನಟಿ ಅಮೂಲ್ಯರಿಗೆ ದೂರವಾಣಿ ಮೂಲಕ ಕೊಲೆ ಬೆದರಿಕೆ ಒಡ್ಡಿದ್ದ. ಈ ಸಂಬಂಧ ವೈಯಾಲಿ ಕಾವಲ್ ಪೊಲೀಸ್ ಠಾಣೆಯಲ್ಲಿ ಅಮೂಲ್ಯ
ನಾಣಿ ವಿರುದ್ಧ 'ಚಂದ್ರ ಚಕೋರಿ'...
2009-12-18 12:29
ಎಚ್ ಡಿ ಕುಮಾರಸ್ವಾಮಿ ನಿರ್ಮಾಣದ 'ಚಂದ್ರ ಚಕೋರಿ' (2003)ಚಿತ್ರಕ್ಕೆ ಹೊಸ ವಿವಾದ ಸುತ್ತಿಕೊಂಡಿದೆ. ತಮಿಳುನಾಡಿನ ಕಣ್ಮಣಿ ರಾಜಾ ಮೊಹಮ್ಮದ್ ಎಂಬ ಚಿತ್ರಕತೆಗಾರ 'ಚಂದ್ರ ಚಕೋರಿ' ಕತೆಯ ನನ್ನದೆ. ಚಿತ್ರದ ನಿರ್ದೇಶಕ ಎಸ್.ನಾರಾಯಣ್ ನನ್ನ ಕತೆಯನ್ನು ಕದ್ದ್ದಿದ್ದಾರೆ ಎಂದು ಆರೋಪಿಸಿದ್ದಾರೆ ಇದುವರೆಗೂ ನನಗೆ ಗೌರವ ಧನವನ್ನೂ ಕೊಟ್ಟಿಲ್ಲ ಎಂದು ಆತ ದೂರಿದ್ದಾನೆ. ಈ ಸಂಬಂಧ ರಾಜಾ ಮೊಹಮ್ಮದ್ ತಮಿಳುನಾಡು
ಫ್ಲಾಪ್ ತಾರೆಗಳ ಪೇಜ್ 3 ಶೋಕಿ
2009-12-18 12:17
'ಹಾಗೆ ಸುಮ್ಮನೆ' ಕಿರಣ್, 'ಗಂಡ ಹೆಂಡತಿ' ಸಂಜನಾ, 'ಮನಸಾರೆ' ದಿಗಂತ್ ಮಂಚಲೆ, 'ಚಮ್ಕಾಯಿಸಿ ಚಿಂದಿ ಉಡಾಯಿಸಿ' ನಿಧಿ ಸುಬ್ಬಯ್ಯ, 'ಮೆರವಣಿಗೆ' ಐಂದ್ರಿತಾ ರೇ, 'ಜೋಗಿ' ಜೆನ್ನಿಫರ್ ಕೋತ್ವಾಲ್, 'ಮಣಿ' ಮಯೂರ್, 'ಸಜನಿ' ಶರ್ಮಿಳಾ ಮಾಂಡ್ರೆ, 'ವೆಂಕಟ ಇನ್ ಸಂಕಟ' ಮೇಘನಾ... ಇವರನ್ನು ನಟನೆಯಲ್ಲದೆ ಮತ್ತೊಂದು ಅಂಶ ಬೆಸೆದಿದೆ.ಇವರೆಲ್ಲ ಫ್ಲಾಪ್ ಸ್ಟಾರ್ ಗಳು ಅಂತ ನೀವೇನಾದರೂ ಅಂದುಕೊಂಡರೆ ಅದು
ಕಲಾವಿದರ ಸಂಘಕ್ಕೆ ಅಂಬರೀಷ್...
2009-12-18 11:17
ಸಹಕಲಾವಿದರ ವರ್ತನೆಗೆ ಬೇಸತ್ತು ರೆಬಲ್ ಸ್ಟಾರ್ ಅಂಬರೀಷ್ ಕಲಾವಿದರ ಸಂಘಕ್ಕೆ ಶುಕ್ರವಾರ ರಾಜೀನಾಮೆ ಸಲ್ಲಿಸಿದ್ದಾರೆ. ರಾಜೀನಾಮೆ ಪತ್ರಗಳನ್ನು ನಿರ್ಮಾಪಕ ಹಾಗೂ ನಿರ್ದೇಶಕರ ಸಂಘಕ್ಕೂ ರವಾನಿಸಿದ್ದಾರೆ. ಬೇಡಿಕೆಯಲ್ಲಿರುವ ನಟರ ಅಸಹಕಾರ ಧೋರಣೆಯಿಂದ ಬೇಸರಗೊಂಡು ರಾಜೀನಾಮೆ ನೀಡುತ್ತಿರುವುದಾಗಿ ಅಂಬರೀಷ್ ತಿಳಿಸಿದ್ದಾರೆ.''ಕಲಾವಿದರ ಸಂಘದ ಸಭೆ ಸಮಾರಂಭಗಳಿಗೆ ಕರೆದರೆ ಯಾರೂ ಬರುವುದಿಲ್ಲ. ಒಬ್ಬನೇ ಎಷ್ಟು ಅಂತ ಮಾಡಲಿ. ನನಗೂ ವಯಸ್ಸಾಗಿದೆ. ಇನ್ನು ಎಷ್ಟು
ಭೀಮಕಾಯ ಸೌಮ್ಯ ಸ್ವಭಾವದ...
2009-12-18 09:07
ಸಾಹಸ ಕಲಾವಿದ ಸರ್ಕಸ್ ಬೋರಣ್ಣ (74) ಗುರುವಾರ ನಿಧನರಾಗಿದ್ದಾರೆ. ಬೆಂಗಳೂರು ಶ್ರೀನಗರದಲ್ಲಿರುವ ಅವರ ಸ್ವಗೃಹದಲ್ಲಿ ದುಃಖ ಮಡುಗಟ್ಟಿತ್ತು. ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದ ಅವರು ಡಿ.ಜಿ.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.ಸರ್ಕಸ್ ಬೋರಣ್ಣ ಅವರು ಪತ್ನಿ, ಮಗ ಹಾಗೂ ಮಗಳನ್ನು ಅಗಲಿದ್ದಾರೆ. ಭೀಮಕಾಯದ ಸರ್ಕರ್ ಬೋರಣ್ಣ ಮೃದು ಸ್ವಭಾವದವರಾಗಿದ್ದರು. ಬೋರಣ್ಣ ಫೈಟ್ ಮಾಡಲು ನಿಂತ ಎಂದರೆ ಪ್ರೇಕ್ಷಕರು ಬೆಚ್ಚಿ
ಜನವರಿಯಲ್ಲಿ ಚಲನಚಿತ್ರ...
2009-12-18 07:19
2007-08ನೇ ಸಾಲಿನ ಚಲನಚಿತ್ರ ಪ್ರಶಸ್ತಿ ಸಮಾರಂಭವನ್ನು ಜನವರಿಯಲ್ಲಿ ಬೆಂಗಳೂರಿನಲ್ಲೇ ನಡೆಸಲಾಗುವುದು ಎಂದು ವಾರ್ತಾ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ತಿಳಿಸಿದ್ದಾರೆ. ಶಿವಮೊಗ್ಗದಲ್ಲಿ ನಡೆಸಲು ಉದ್ದೇಶಿಸಿದ್ದ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಕೈಬಿಡಲಾಗಿದೆ ಎಂದು ಸುದ್ದಿಗಾರರಿಗೆ ಅವರು ಗುರುವಾರ ತಿಳಿಸಿದರು.ಪ್ರಶಸ್ತಿಗಳ ಆಯ್ಕೆ ಕಳೆದ ಜನವರಿಯಲ್ಲೆ ನಡೆದಿದ್ದು ಪ್ರದಾನ ಮಾಡುವ ಕಾರ್ಯಕ್ರಮ ಮಾತ್ರ ಬಾಕಿ ಉಳಿದಿದೆ. ಈ ವರ್ಷದ ಪ್ರಶಸ್ತಿಗೆ ಚಿತ್ರಗಳನ್ನು
ಮುರ್ಡೋಕ್ ತೆಕ್ಕೆಗೆ ಎನ್...
2009-12-18 07:02
ಮುಂಬೈ ಡಿ 18 : ಮಾಧ್ಯಮ ದೊರೆ ರುಪರ್ಟ್ ಮುರ್ಡೋಕ್ ನೇತೃತ್ವದ ಟೈಮ್ ವಾರ್ನರ್ ಕಂಪೆನಿ, ಪ್ರಣವ್ ರಾಯ್ ನೇತೃತ್ವದ ಎನ್ ಡಿ ಟಿ ವಿ ಮನರಂಜನಾ ಚಾನಲ್ ಎನ್ ಡಿಟಿವಿ ಇಮ್ಯಾಜಿನ್ ನನ್ನು ಖರೀದಿಸಲಿದೆ. ಈ ಚಾನಲ್ ಅನ್ನು 592 ಕೋಟಿ ರೂಪಾಯಿಗಳಿಗೆ ಖರೀದಿಸಲು ಟೈಮ್ ವಾರ್ನರ್ ಕಂಪೆನಿ ಆಡಳಿತ ಮಂಡಳಿ
ವಿಷಮ ಸ್ಥಿತಿಯಲ್ಲಿ ಗಾಯಕ ಸಿ...
2009-12-18 06:12
ಕನ್ನಡ ಸುಗಮ ಸಂಗೀತದ ಗಾರುಡಿಗ ಸಿ ಅಶ್ವಥ್ ಅವರು ತೀವ್ರವಾಗಿ ಅಸ್ವಸ್ಥಗೊಂಡಿದ್ದಾರೆ. ಚಿಕಿತ್ಸೆಗಾಗಿ ಬೆಂಗಳೂರು ಯಶವಂತಪುರದ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು ತೀವ್ರ ನಿಗಾ ಘಟಕದಲ್ಲಿ ಅಶ್ವಥ್ ಅವರನ್ನು ಇಡಲಾಗಿದೆ. ಅಶ್ವಥ್ ಅವರು ಕೆಲದಿನಗಳಿಂದ ಪಿತ್ತಜನಕಾಂಗ ಹಾಗೂ ಮೂತ್ರಜನಕಾಂಗದ ಸಮಸ್ಯೆಯಿಂದ ಬಳಲುತ್ತಿದ್ದರು.ಗುರುವಾರ ಬೆಳಗ್ಗೆಯ ತನಕ ಆರೋಗ್ಯವಾಗಿಯೇ ಇದ್ದ ಅಶ್ವಥ್ ಅವರಿಗೆ ಮಧ್ಯಾಹ್ನ ಇದ್ದಕ್ಕಿಂದ್ದಂತೆ ತೀವ್ರ
ಕೊಟ್ಟ ಮಾತಿಗೆ ತಪ್ಪಿದ...
2009-12-17 11:59
ಬೆಂಗಳೂರು, ಡಿ. 17 : ಕನ್ನಡ ಚಿತ್ರರಂಗದಲ್ಲಿ ಕೊಟ್ಟ ಮಾತಿಗೆ, ಸ್ವೀಕರಿಸಿದ ವಚನಗಳಿಗೆ ಕಿಮ್ಮತ್ತಿಲ್ಲ ಎನ್ನುವುದು ಇಂದು ಮತ್ತೊಮ್ಮೆ ಸಾಬೀತಾಯಿತು. ನೂರು ಜನ್ಮಕು ಚಿತ್ರೀಕರಣದ ಹಾಂಗ್ ಕಾಂಗ್ ಹಗರಣವನ್ನು ಇಲ್ಲಿಗೆ ಮುಕ್ತಾಯ ಗೊಳಿಸಲಾಗಿದೆ, ಇದರ ಬಗ್ಗೆ ನಾಗತಿಯವರಾಗಲೀ ಅಥವಾ ಐಂದ್ರಿತಾ ಆಗಲೀ ಬಹಿರಂಗವಾಗಿ ಮಾತನಾಡಕೂಡದು ಎಂದು ವಾಣಿಜ್ಯ ಮಂಡಳಿ ಹೊರಡಿಸಿದ್ದ ಅಲಿಖಿತ ಫರ್ಮಾನನ್ನು ನಿರ್ದೇಶಕ ನಾಗತಿ ಗುರುವಾರ
ಬಾಕ್ಸಾಫೀಸ್ ಘರ್ಷಣೆ...
2009-12-17 11:49
ಪುನೀತ್ ರಾಜ್ ಕುಮಾರ್ ಅಭಿನಯದ 'ರಾಮ್' ಚಿತ್ರ ಈ ಶುಕ್ರವಾರ(ಡಿ.18) ಬಿಡುಗಡೆಯಾಗುತ್ತಿಲ್ಲ. ರಾಮ್ ಚಿತ್ರದ ಬಿಡುಗಡೆಯನ್ನು ಡಿ.25ಕ್ಕೆ ಮುಂದೂಡಲಾಗಿದೆ. ಎರಡು ಚಿತ್ರಗಳ ನಡುವಿನ ಘರ್ಷಣೆಯನ್ನು ತಪ್ಪಿಸುವ ಸಲುವಾಗಿ ರಾಮ್ ಚಿತ್ರದ ಬಿಡುಗಡೆಯನ್ನು ಒಂದು ವಾರ ಮುಂದೂಡಲಾಗಿದೆ ಎನ್ನುತ್ತವೆ ಮೂಲಗಳು.ಕಳೆದ ವಾರ ಬಿಡುಗಡೆಯಾದ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ 'ಮಳೆಯಲಿ ಜೊತೆಯಲಿ' ಚಿತ್ರಕ್ಕೆ ಬಾಕ್ಸಾಫೀಸಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ.
ಎರಡುವರೆ ಸಾವಿರ ಕೋಟಿ ಬಜೆಟ್...
2009-12-17 10:13
ಎರಡುವರೆ ಗಂಟೆಗಳ ಚಿತ್ರಕ್ಕಾಗಿ ಎರಡುವರೆ ಸಾವಿರ ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ ಎಂದರೆ ನಂಬುತ್ತೀರಾ? ಸಿನಿಮಾ ಚಿತ್ರೀಕರಿಸಲು ವಿಶೇಷ ಕ್ಯಾಮೆರಾ ತಯಾರಿಸಿಕೊಳ್ಳುತ್ತ್ತೇನೆ ಎಂದರೆ ನಿರ್ಮಾಪಕ ಒಪ್ಪುತ್ತಾನಾ? ಸಿನಿಮಾ ಪ್ರದರ್ಶನಕ್ಕಾಗಿ ಪ್ರಾಜೆಕ್ಟರ್ ಗಳನ್ನು, ಸ್ಕ್ರೀನ್ ಗಳನ್ನು ಬದಲಾಯಿಸಿಕೊಳ್ಳುತ್ತಿದ್ದಾರೆಂದರೆ ಆಶ್ಚರ್ಯ ಎನಿಸುವುದಿಲ್ಲವೆ? ಇದೆಲ್ಲಾ 'ಅವತಾರ್' ಚಿತ್ರಕ್ಕಾಗಿ ನಡೆಯುತ್ತಿರುವ ತೆರೆಮರೆಯ ಕಸರತ್ತುಗಳು.ಹನ್ನೆರಡು ವರ್ಷಗಳ ಹಿಂದೆ 'ಟೈಟಾನಿಕ್' ತೋರಿಸಿದ ಜೇಮ್ಸ್ ಕ್ಯಾಮೆರಾನ್
ವಿರಸವೆಂಬ ವಿಷಕೆ ಬಲಿಯಾದೆ...
2009-12-17 09:08
ಸದಭಿರುಚಿಯ ಚಿತ್ರಗಳ ನಿರ್ಮಾಪಕ ಚಂದೂಲಾಲ್ ಜೈನ್ ಇಂದು (ಡಿ.17) ನಿಧನರಾಗಿದ್ದಾರೆ. ಅವರ ನಿರ್ಮಾಣದಲ್ಲಿ ಬಂದಂತಹ ಚಿತ್ರಗಳು ಕನ್ನಡ ಚಲನಚಿತ್ರ ಕ್ಷೇತ್ರವನ್ನು ಶ್ರೀಮಂತಗೊಳಿಸಿವೆ. ಈ ಸಂದರ್ಭದಲ್ಲಿ ಅವರ ನಿರ್ಮಾಣದ 'ಭೂತಯ್ಯನ ಮಗ ಅಯ್ಯು' ಚಿತ್ರದ ವಿರಸವೆಂಬ ವಿಷಕೆ ಬಲಿಯಾದೆ ಏತಕೇ...'' ಎಂಬ ಹಾಡಿನ ಚರಣಗಳನ್ನು ಅವರಿಗೆ ಅರ್ಪಿಸುತ್ತಿದ್ದೇವೆ. ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಕಾದಂಬರಿ ಆಧಾರಿತ ಚಿತ್ರ
ಭೂತಯ್ಯನ ರೂವಾರಿ ಚಂದೂಲಾಲ್...
2009-12-17 07:37
ಚಂದೂಲಾಲ್ ಜೈನ್ ಇನ್ನಿಲ್ಲ. ಮೂವತ್ತೈದು ಕನ್ನಡ ಸಿನಿಮಾಗಳ ನಿರ್ಮಾಪಕ ಇನ್ನಿಲ್ಲ. ಭೂತಯ್ಯನ ಮಗ ಅಯ್ಯು, ಭಕ್ತ ಸಿರಿಯಾಳ, ತಬ್ಬಲಿಯು ನೀನಾದೆ ಮಗನೆ, ಗೋಧೂಳಿ, ವೀರಪ್ಪನ್, ಗಂಗವ್ವ ಗಂಗಾಮಾಯಿ, ಹೇಮಾವತಿ, ಪ್ರಾಯ ಪ್ರಾಯ ಪ್ರಾಯ, ಬೆತ್ತಲೆಸೇವೆ ಚಿತ್ರಗಳ ರೂವಾರಿ ಕಣ್ಮರೆ. ಇಂದು ಬೆಳಗ್ಗೆ (ಡಿಸೆಂಬರ್ 17ರ ಗುರುವಾರ) 9.45ಕ್ಕೆ ಜೈನ್ ಕೊನೆಯುಸಿರೆಳೆದಿದ್ದಾರೆ. ಪತ್ನಿ ಲೀಲಾ ಹಾಗೂ ಮಕ್ಕಳಾದ ರಾಜಕುಮಾರ್
'ಸಿಹಿ ಮುತ್ತು' ಚಿತ್ರದ ಐಟಂ...
2009-12-17 07:11
'ಸಿಹಿ ಮುತ್ತು' ಚಿತ್ರಕ್ಕಾಗಿ ಬಾಲಿವುಡ್ ನಟನೊಬ್ಬನನ್ನು ಅತಿಥಿಯಾಗಿ ಕರೆತರಬೇಕು ಎಂಬ ನಿರ್ದೇಶಕ ಅಶೋಕ್ ಕಶ್ಯಪ್ ಅವರ ಪ್ರಯತ್ನ ವಿಫಲವಾಗಿದೆ. ಕಡೆಗೆ ವಿಧಿಯಿಲ್ಲದೆ ಚಿತ್ರ ಹಾಡೊಂದಕ್ಕೆ ಛಾಲೆಂಜಿಂಗ್ ಸ್ಟಾರ್ ದರ್ಶನ್ ಅವರನ್ನು ಆಯ್ಕೆ ಮಾಡಿಕೊಂಡಿದ್ದಾರೆ.ಐಟಂ ಸಾಂಗ್ ನ ಚಿತ್ರೀಕರಣ ಸಾಮಿಸ್ ಡ್ರೀಮ್ ಲ್ಯಾಂಡ್ ನಲ್ಲಿ ಭರದಿಂದ ಸಾಗುತ್ತಿದೆ. ನಾಲ್ಕು ದಿನಗಳ ಕಾಲ ನಡೆಯಲಿರುವ ಹಾಡಿನ ಚಿತ್ರೀಕರಣ ಬುಧವಾರ ಆರಂಭವಾಯಿತು.
'ನೂರು ಜನ್ಮಕು'...
2009-12-17 06:24
ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ 'ನೂರು ಜನ್ಮಕು' ಚಿತ್ರದ ಪತ್ರಿಕಾಗೋಷ್ಠಿಯನ್ನು ಗುರುವಾರ (ಡಿ.17) ಬೆಂಗಳೂರು ಸಿಟಿ ರೈಲ್ವೆ ನಿಲ್ದಾಣದ ಬಳಿ ಇರುವ ಬೆಲ್ ಹೋಟೆಲ್ ನಲ್ಲಿ ಮಧ್ಯಾಹ್ನ 12 ಗಂಟೆಗೆ ಆಯೋಜಿಸಲಾಗಿದೆ. ಆದರೆ ಈ ಪತ್ರಿಕಾಗೋಷ್ಠಿಗೆ ಚಿತ್ರದ ನಾಯಕಿ ಐಂದ್ರಿತಾ ರೇ ಬರುತ್ತಿಲ್ಲ. 'ನೂರು ಜನ್ಮಕು' ಚಿತ್ರಕ್ಕೆ ಸಂಬಂಧಿಸಿದ ಪತ್ರಿಕಾಗೋಷ್ಠಿ ಇದಾಗಿದ್ದು 'ಕಪಾಳಮೋಕ್ಷ' ಪ್ರಕರಣಕ್ಕೂ ಇದಕ್ಕೂ ಯಾವುದೇ
ಕುವೆಂಪು ಮನೆಯಲ್ಲೇ ರಸಋಷಿ...
2009-12-16 11:44
ರಂಗಭೂಮಿ ಕಲಾವಿದ ಋತ್ವಿಕ್ ಸಿಂಹ ಅವರ ಚೊಚ್ಚಲ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಚಿತ್ರ 'ರಸಋಷಿ ಕುವೆಂಪು'. ಇದೊಂದು ವಿಭಿನ್ನ ಚಿತ್ರವಾಗಿದ್ದು ಚಿತ್ರೋದ್ಯಮದಲ್ಲಿ ಒಂದು ಅಪೂರ್ವ ಪ್ರಯತ್ನ ಎನ್ನುತ್ತಾರೆ ಋತ್ವಿಕ್. ರಸಋಷಿ ಕುವೆಂಪು ಪಾತ್ರವನ್ನು ಋತ್ವಿಕ್ ತಂದೆ ಸಿ ಆರ್ ಸಿಂಹ ಮಾಡುತ್ತಿದ್ದಾರೆ.ಕುವೆಂಪು ಅವರ ಜೀವನ ಪ್ರಮುಖ ಘಟ್ಟಗಳನ್ನು ಚಿತ್ರ ಹೊಂದಿದೆ. ಚಿತ್ರದ ನಿರೂಪಣೆ ಸಮಕಾಲೀನವಾಗಿದ್ದ್ದು
ಬಿಕಿನಿ ಕೈಬಿಡುವಂತೆ...
2009-12-16 09:59
ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್ ಹುಚ್ಚಾಟಗಳು ದಿನೇ ದಿನೇ ಮಿತಿಮೀರುತ್ತಿರುವುದಕ್ಕೆ ಇಲ್ಲಿದೆ ನಿದರ್ಶನ. ಈತನ ಹುಚ್ಚಾಟಗಳು ಕತ್ರಿನಾ ಕೈಫ್ ವೃತ್ತಿಜೀವನಕ್ಕೂ ತೊಡಕಾಗಿ ಪರಿಣಮಿಸಿವೆ.ಇತ್ತೀಚೆಗೆ ರಾಜಕಾರಣಿ ಪ್ರಫುಲ್ ಪಟೇಲ್ ಸಂಬಂಧಿಯೊಬ್ಬರ ಮದುವೆ ಸಮಾರಂಭದಲ್ಲಿ ಕತ್ರಿನಾರನ್ನು ಕುಣಿಯುವಂತೆ ಸಲ್ಲು ಒತ್ತಾಯಿಸಿದ್ದ.ಆಕೆಗೆ ಮೈ ಹುಷಾರಿಲ್ಲದಿದ್ದರೂ ಕುಣಿಸಿದ ಕಾರಣ ಆಕೆ ಆಸ್ಪತ್ರೆ ಪಾಲಾಗಿದ್ದರು. ಇದೀಗ ಸಂಪೂರ್ಣ ವಿಶ್ರಾಂತಿ ಪಡೆಯುವಂತೆ ವೈದ್ಯರು
ಸ್ವದೇಶ,ವಿದೇಶ ಸುತ್ತಿ ಬಂದ...
2009-12-16 09:00
ಛಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದಲ್ಲಿ ಮೂಡಿ ಬರುತ್ತಿರುವ ಬಹು ನಿರೀಕ್ಷೆಯ ಚಿತ್ರ 'ಪೊರ್ಕಿ'. ಸ್ವದೇಶ ಸೇರಿದಂತೆ ವಿದೇಶದ ರಮಣೀಯ ಸ್ಥಳಗಳಲ್ಲಿ ಚಿತ್ರೀಕರಣವನ್ನು ಯಶಸ್ವಿಯಾಗಿ ಪೂರೈಸಿರುವ 'ಪೊರ್ಕಿ' ಚಿತ್ರಕ್ಕೆ ರಾಜನ್ ಸ್ಟೂಡಿಯೋದಲ್ಲಿ ಸ್ಪೆಷಲ್ ಎಫೆಕ್ಟ್ ಅಳವಡಿಸಲಾಗುತ್ತಿದೆ ಎಂದು ನಿರ್ಮಾಪಕ ದತ್ತಾತ್ರೇಯ ಬಚ್ಚೇಗೌಡ ತಿಳಿಸಿದ್ದಾರೆ. ಖ್ಯಾತ ನಿರ್ದೇಶಕ ಎಂ.ಡಿ.ಶ್ರೀಧರ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ‘ಅಪಾರ ವೆಚ್ಚದಲ್ಲಿ ಮೂಡಿಬಂದಿರುವ ಈ ಚಿತ್ರ
ನಮ್ಮ ತಾತ ಭಾರದ್ವಾಜರ ಸಿನಿಮಾ...
2009-12-16 07:53
ಸರಕಾರಿ ಕೆಲಸಗಳ ತುಂಬ ಒತ್ತಡದ ನಡುವೆಯೂ ಕನ್ನಡ ಸಿನಿಮಾ ಉದ್ಯಮದ ಒಂದು ಕಾರ್ಯಕ್ರಮದಲ್ಲಿ ಪಾಲುಗೊಳ್ಳಲು ಒಪ್ಪಿಕೊಂಡೆ. ಮನುಷ್ಯನಿಗೆ ಆಗಾಗ ಇಂಥ ಬ್ರೇಕುಗಳು ಸಿಗಬೇಕು ಎಂದರು ಕರ್ನಾಟಕದ ರಾಜ್ಯಪಾಲ ತಾತಪ್ಪ ಹಂಸರಾಜ್ ಭಾರದ್ವಾಜ್. ಅವರು ಮಂಗಳವಾರ ಬೆಂಗಳೂರಿನ ಅಶೋಕ ಹೋಟೆಲಿನಲ್ಲಿ ಜರುಗಿದ ಬಸವರೆಡ್ಡಿ ನಿರ್ಮಾಣದ ಮಂದಹಾಸ ಚಿತ್ರದ ಮುಹೂರ್ತಕ್ಕೆ ಬಂದಿದ್ದರು. ಕ್ಲಾಪ್ ಮಾಡುವ ಕೆಲಸವನ್ನು ಅವರಿಗೆ ವಹಿಸಲಾಗಿತ್ತು.ಸುಮಾರು 20
No comments:
Post a Comment